ಪುತ್ತೂರು: ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಾ.23 ರಿಂದ ಏಪ್ರಿಲ್ 1ರ ತನಕ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳವರ ನೇತೃತ್ವದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜಾತ್ರೋತ್ಸವ ಹಾಗೂ ನಂತರ ನನ್ಯದಲ್ಲಿ ನಡೆಯಲಿರುವ ಶ್ರೀ ದಂಡನಾಯಕ ದೈವಗಳ ನೇಮ, ರಾಜನ್ ದೈವದ ನೇಮ ಹಾಗೂ ಶ್ರೀ ದೇವಳದಲ್ಲಿ ಗುಳಿಗನ ಕೋಲ ಜರಗಲಿದೆ.
ಮಾ.23 ರಂದು ರವಿವಾರ ಬೆಳಿಗ್ಗೆ ಗಂಟೆ 7ಕ್ಕೆ ಉಗ್ರಾಣ ತುಂಬಿಸುವುದು , 7.30ಕ್ಕೆ ಧ್ವಜಾರೋಹಣ, ಬಲಿ ಹೊರಡುವುದು ಲಕ್ಷ್ಮೀಪೂಜೆ, ಕಾಣಿಕೆ ಡಬ್ಬಿ ವಿತರಣೆ, ಗಂಟೆ 9ರಿಂದ ಮಹಾ ಮೃತ್ಯುಂಜಯ ಹೋಮ, ಮಹಾಪೂಜೆ, ಮಧ್ಯಾಹ್ನ ಗಂಟೆ 1ರಿಂದ ಅನ್ನಸಂತರ್ಪಣೆ(ಕೌಡಿಚ್ಚಾರು ದಿ| ಕೇಪು ಮೂಲ್ಯರ ಸ್ಮರಣಾರ್ಥ ಪತ್ನಿ ಗಿರಿಜಾ ಕೇಪು ಮೂಲ್ಯ ಮತ್ತು ಮಕ್ಕಳ ಸೇವೆ, ಶ್ರೀಮತಿ ರಾಜಲಕ್ಷ್ಮಿ ರಾಜಾರಾವ್ ನಿಧಿಮುಂಡ ಮನೆಯವರಿಂದ), ರಾತ್ರಿ ಗಂಟೆ 8ರಿಂದ ಉತ್ಸವ ಬಲಿ, ರಾತ್ರಿ ಗಂಟೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಚಿಣ್ಣರ ಕಲರವ, ರಾತ್ರಿ ಗಂಟೆ ೯ ರಿಂದ ಗೆಳೆಯರ ಬಳಗ ಕಾವು ಇವರಿಂದ ಜಿ.ಯನ್. ಬಂಗೇರ ವಿರಚಿತ ತುಳು ಸಾಮಾಜಿಕ ನಾಟಕ ‘ಬಡವನ ಉಡಲ್’ ನಡೆಯಲಿದೆ.
ಮಾ.24 ರಂದು ಸೋಮವಾರ ಬೆಳಿಗ್ಗೆ ಗಂಟೆ 7 ರಿಂದ ಉತ್ಸವ, ಮಧ್ಯಾಹ್ನ ಗಂಟೆ 12 ಕ್ಕೆ ಮಹಾಪೂಜೆ, ಶ್ರೀ ದೇವರ ಬಲಿ, ಮಧ್ಯಾಹ್ನ ಗಂಟೆ 1 ರಿಂದ ಅನ್ನಸಂತರ್ಪಣೆ(ಶ್ರೀ ದೇವದಾಸ್ ಕಾಮತ್ ನಿವೃತ್ತ ಮೆನೇಜರ್, ವಿಜಯಾ ಬ್ಯಾಂಕ್ ಕಾವು ಇವರ ಸೇವೆ), ರಾತ್ರಿ ಗಂಟೆ 8 ರಿಂದ ಉತ್ಸವ ಬಲಿ, ಭಾರತ ಸರ್ಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ತುಡರ್ ಯುವಕ ಮಂಡಲ(ರಿ.) ನನ್ಯ-ಕಾವು ಇದರ 14ನೇ ವಾರ್ಷಿಕೋತ್ಸವ ತುಡರ್ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು, ಸಂಜೆ ಗಂಟೆ 7 ರಿಂದ ತುಡರ್ ಕಲಾ ಸಂಘದ ವಿದ್ಯಾರ್ಥಿಗಳಿಂದ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿ ಪುತ್ತೂರು ಇವರ ಸಹಯೋಗದೊಂದಿಗೆ ’ನೃತ್ಯಾರ್ಪಣಾ’, ರಾತ್ರಿ ಗಂಟೆ 8.30ರಿಂದ ಸಭಾ ಕಾರ್ಯಕ್ರಮ, ಸನ್ಮಾನ, ರಾತ್ರಿ ಗಂಟೆ 9.30ರಿಂದ ಸಮಾಜರತ್ನ ಲೀಲಾಧರ ಶೆಟ್ಟಿ ಸಾರಥ್ಯದಲ್ಲಿ ಶರತ್ ಉಚ್ಚಿಲ ನಿರ್ದೇಶನದ ಬಲೆ ತೆಲಿಪಾಲೆ ಖ್ಯಾತಿಯ ಪ್ರಶಸ್ತಿ ವಿಜೇತ ಪ್ರಶಂಸಾ ಕಾಪು ತಂಡದ ಕುಸಲ್ದ ಬಿರ್ಸೆ ಸಂದೀಪ್ ಶೆಟ್ಟಿ ಮಾಣಿಬೆಟ್ಟು ಹಾಗೂ ತೆಲಿಕೆದ ಅರಸೆ ಪ್ರಸನ್ನ ಶೆಟ್ಟಿ ಬೈಲೂರು ಅಭಿನಯದಲ್ಲಿ ಕಾಪು ರಂಗತರಂಗ ಕಲಾವಿದರಿಂದ ಕುಟ್ಯಣ್ಣನ ಕುಟುಂಬ ತುಳು ಸಾಂಸಾರಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.25 ರಂದು ಮಂಗಳವಾರ ಬೆಳಿಗ್ಗೆ ಗಂಟೆ 7 ರಿಂದ ಬಲಿ, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಶ್ರೀ ದೇವರ ಬಲಿ, ಮಧ್ಯಾಹ್ನ ಗಂಟೆ 1 ರಿಂದ ಅನ್ನಸಂತರ್ಪಣೆ(ಮುಳಿಯ ಪ್ರಾಪರ್ಟಿಸ್ ಇವರ ಸೇವೆ), ರಾತ್ರಿ ಗಂಟೆ 7 ರಿಂದ ತಾಯಂಬಕ ಸೇವೆ, ನಡುದೀಪೋತ್ಸವ, ಉತ್ಸವ ಬಲಿ. ರಾತ್ರಿ ಗಂಟೆ 8.30ರಿಂದ ವಿದುಷಿ ಶ್ರೀಮತಿ ಸುಮಾ ರಾಮ್‌ಪ್ರಸಾದ್ ಬೆಂಗಳೂರು ಮತ್ತು ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್ ಇವರ ಶಿಷ್ಯ ಶ್ರೀ ಶಾರದಾ ಕಲಾ ಶಾಲೆ ಕುಂಬ್ರ ಶಾಖೆಯ ವಿದುಷಿ ಶ್ರೀಮತಿ ದೀಪ್ತಿ ರವಿಚಂದ್ರ ಇವರ ಶಿಷ್ಯ ವೃಂದದಿಂದ ನೃತ್ಯ ಸಮೂಹ ಜರಗಲಿದೆ.
ಮಾ.26 ರಂದು ಬುಧವಾರ ಬೆಳಿಗ್ಗೆ ಗಂಟೆ 9.30ರಿಂದ ದೊಡ್ಡ ದರ್ಶನ ಬಲಿ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ(ಅಣಿಲೆ ದಿ| ಜತ್ತಪ್ಪ ರೈ ಮತ್ತು ಇಳಂತಾಜೆ ದಿ| ಪ್ರೇಮಾವತಿ ರೈಯವರ ಸ್ಮರಣಾರ್ಥ, ಅವರ ಮಗ ಶ್ರೀಮತಿ ಮತ್ತು ಶ್ರೀ ರಾಮದಾಸ ರೈ ಮದ್ಲ್ಲ ಮತ್ತು ಮಕ್ಕಳು ಹಾಗೂ ಅಂಕೊತ್ತಿಮಾರು ದಿ| ದೇರಣ್ಣ ರೈ ಇವರ ಪತ್ನಿ ಮತ್ತು ಮಕ್ಕಳ ಸೇವೆ), ರಾತ್ರಿ ಗಂಟೆ 7 ರಿಂದ ಉತ್ಸವ, ಗಂಟೆ 7.30ರಿಂದ ಅಮ್ಚಿನಡ್ಕ ಶ್ರೀ ದೇವರ ಸವಾರಿ, ಮರಳಿ ಬಂದು ಶಯನ ನಡೆಯಲಿದೆ.
ಮಾ.27 ರಂದು ಗುರುವಾರ ಬೆಳಿಗ್ಗೆ ಗಂಟೆ 7ಕ್ಕೆ ಬಾಗಿಲು ತೆರೆಯುವುದು, 9 ರಿಂದ ನನ್ಯದಲ್ಲಿ ಮುಂಡ್ಯ ಹಾಕಲು ತೆರಳುವುದು, ಮಧ್ಯಾಹ್ನ ಗಂಟೆ 11.30ಕ್ಕೆ ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ,ರಾತ್ರಿ ಗಂಟೆ 10 ಕ್ಕೆ ಮಂಜಕೊಟ್ಯದಿಂದ ಶ್ರೀ ದಂಡನಾಯಕ ದೈವಗಳ ಭಂಡಾರ ಬರುವುದು, ಉತ್ಸವ ಬಲಿ, ಅವಭೃತ ಸ್ನಾನ, ಸಂಜೆ ಗಂಟೆ 5.45ರಿಂದ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆ(ಸೇವಾಕರ್ತರು: ಶ್ರೀಮತಿ ಪ್ರಭಾ ಮತ್ತು ಶ್ರೀ ಸುಬ್ರಾಯ ಬಲ್ಯಾಯ, ಶ್ರೀ ಕುಮಾರ ಬಲ್ಯಾಯ, ’ಸಂಸ್ಕೃತಿ’ ಮದ್ಲ) ಜರಗಲಿದೆ.
ಮಾ.28 ರಂದು ಶುಕ್ರವಾರ ಬೆಳಿಗ್ಗೆ ಗಂಟೆ 5ಕ್ಕೆ ಬೆಡಿ ಸೇವೆ, ಸೂರ್ಯೋದಯಕ್ಕೆ ರಾಜಾಂಗಣದಲ್ಲಿ ಗಂಧಪ್ರಸಾದ ವಿತರಣೆ, ಧ್ವಜಾವರೋಹಣ, ಮಂತ್ರಾಕ್ಷತೆ, ರಾತ್ರಿ ಗಂಟೆ 9ಕ್ಕೆ ಶ್ರೀ ದಂಡನಾಯಕ ದೈವಗಳ ದೀವಟಿಗೆ ನಮಸ್ಕಾರ, ಮಾ.29 ರಂದು ಶನಿವಾರ ಶ್ರೀ ದಂಡನಾಯಕ ದೈವಗಳ ಭಂಡಾರ ನನ್ಯಕ್ಕೆ ಹೋಗುವುದು, ಮಾ.30 ರಂದು ರವಿವಾರ ನನ್ಯಮಾಡದಲ್ಲಿ ಶ್ರೀ ದಂಡನಾಯಕ ದೈವಗಳ ನೇಮ, ಮಾ.31 ರಂದು ಸೋಮವಾರ ಪೂರ್ವಾಹ್ನ ಗಂಟೆ 10ಕ್ಕೆ ನನ್ಯದಲ್ಲಿ ರಾಜನ್ ದೈವದ ನೇಮ, ಏ.1 ರಂದು ಮಂಗಳವಾರ ರಾತ್ರಿ ಗಂಟೆ 7ಕ್ಕೆ ದೇವಸ್ಥಾನದಲ್ಲಿ ಗುಳಿಗನ ಕೋಲ ನಡೆಯಲಿದೆ.
ಶ್ರೀ ದೇವರ ಸನ್ನಿಧಿಯಲ್ಲಿ ಜರಗುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕಾವು ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ದಿವ್ಯನಾಥ ಶೆಟ್ಟಿ ಕಾವು ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಊರ ಹತ್ತು ಸಮಸ್ತರು, ಪವಿತ್ರಪಾಣಿ ನನ್ಯ ಅಚ್ಯುತ ಮೂಡೆತ್ತಾಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಸಿರುವಾಣಿ ಮೆರವಣಿಗೆ
ಮಾ. 22 ರಂದು ಶನಿವಾರ ಸಂಜೆ ಗಂಟೆ 5 ರಿಂದ ಶ್ರೀ ಕೃಷ್ಣ ಭಜನಾ ಮಂದಿರ, ಕೌಡಿಚ್ಚಾರ್ ನಿಂದ ಹೊರಟು ಶ್ರೀ ದೇವಳಕ್ಕೆ ಹಸಿರುವಾಣಿ ಮೆರವಣಿಗೆ(ಕೌಡಿಚ್ಚಾರು, ಮಿನೋಜಿಕಲ್ಲು, ಮದ್ಲ, ಪಟ್ಟುಮೂಲೆ, ನನ್ಯ, ಚಾಕೋಟೆ, ಆಚಾರಿಮೂಲೆ, ಕಮಲಡ್ಕ ಸ್ಥಳಗಳಲ್ಲಿ ಇರುವವರಿಂದ), ಮಾ.24 ರಂದು ಸೋಮವಾರ ಸಂಜೆ ಗಂಟೆ 5 ರಿಂದ ಮಾಣಿಯಡ್ಕ ಅಂಗಡಿಯ ಬಳಿಯಿಂದ(ಕೆರೆಮಾರು, ನಿಧಿಮುಂಡ, ಬಾಳೆಕೊಚ್ಚಿ, ಮುಂಡಕೊಚ್ಚಿ, ಪಿಲಿಪಂಜರ, ಬರೆಕೆರೆ, ಮಾಣಿಯಡ್ಕ ಎಂಬ ಸ್ಥಳಗಳಲ್ಲಿರುವವರಿಂದ), ಮಾ. 25 ರಂದು ಮಂಗಳವಾರ ಅಪರಾಹ್ನ ಗಂಟೆ 3ಕ್ಕೆ ಅಮ್ಚಿನಡ್ಕ ಮಳಿ ಎಂಬಲ್ಲಿಂದ(ಮಳಿ, ಅಮ್ಚಿನಡ್ಕ, ಬಿಂತೋಡಿ, ಬದಿಯಡ್ಕ, ಮುದರಪಳ್ಳ, ಅಂಕೊತ್ತಿಮಾರು, ಅಂತಪ್ಪ ಶೆಟ್ಟಿನಗರ, ಉಜ್ರಾಗುಳಿ, ಕೊಚ್ಚಿ, ಟಪ್ಪಾಲುಕಟ್ಟೆ, ಗುತ್ತು, ಡೆಂಬಾಳೆ, ಪೂವಂದೂರು, ತೋಟದಮೂಲೆ ಈ ಸ್ಥಳಗಳಲ್ಲಿ ಇರುವವರಿಂದ), ಮಾ.26 ರಂದು ಬುಧವಾರ ಅಪರಾಹ್ನ ಗಂಟೆ 5.30ರಿಂದ ಪಲಾಶತ್ತಡ್ಕ ಎಂಬಲ್ಲಿಂದ (ಪಲಾಶತ್ತಡ್ಕ, ಸಪ್ಪೆಟ್ಟಿ, ಪಟ್ಟಾಜೆ, ಪಳನೀರು, ಮಂಜುಕೊಟ್ಟ ಸ್ಥಳಗಳಲ್ಲಿ ಇರುವವರಿಂದ) ಹಸಿರುವಾಣಿ ಮೆರವಣಿಗೆ ನಡೆಯಲಿರುವುದು.