ಪಾಲ್ತಾಡಿ : ಆರೋಗ್ಯ ಮತ್ತು ಕ್ಷೇಮ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ

0

ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಆದ್ಯತೆ – ಭಾಗೀರಥಿ ಮುರುಳ್ಯ

ಸವಣೂರು: ಎಲ್ಲರೂ ಆರೋಗ್ಯಯುತವಾಗಿದ್ದರೆ ಸಮಾಜವು ಸುಸ್ಥಿರವಾಗುತ್ತದೆ.ಈ ನಿಟ್ಟಿನಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು.ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಕೇಂದ್ರ ಆರಂಭಿಸುವ ಮೂಲಕ ಎಲ್ಲರಿಗೂ ಆರೋಗ್ಯ ಸೇವೆ ದೊರೆಯಲು ಸಹಕಾರಿಯಾಗುತ್ತದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಅವರು ಮಾ.21ರಂದು ಪಾಲ್ತಾಡಿ ಗ್ರಾಮದ ಅಂಕತಡ್ಕದಲ್ಲಿ ಸುಮಾರು 65 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಈ ವರ್ಷ 7 ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, 3 ಕೇಂದ್ರಗಳ ಕಾಮಗಾರಿ ಆರಂಭವಾಗಿದೆ ಎಂದರು.

ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್. ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ,ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ,ಸದಸ್ಯರಾದ ಗಿರಿಶಂಕರ ಸುಲಾಯ, ಸತೀಶ್ ಅಂಗಡಿಮೂಲೆ, ಎಂ.ಎ.ರಫೀಕ್,ಭರತ್ ರೈ, ಬಾಬು ಎನ್,ಚಂದ್ರಾವತಿ ಸುಣ್ಣಾಜೆ, ಯಶೋಧಾ ನೂಜಾಜೆ, ಚೇತನಾ ಶಿವಾನಂದ,ಹರಿಕಲಾ ರೈ ಕುಂಜಾಡಿ,ತಾರಾನಾಥ ಬೊಳಿಯಾಲ, ವಿನೋದಾ ರೈ ಚೆನ್ನಾವರ, ಶಬೀನಾ, ಸವಣೂರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಗಂಗಾಧರ ಪೆರಿಯಡ್ಕ ,ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಸುಧಾಕ್ಷಿಣಿ ,ಚೈತ್ರಾ,ಅಕ್ಷತಾ,ರಶ್ಮಿ, ಪ್ರಮುಖರಾದ ಪುಟ್ಟಣ್ಣ ನಾಯ್ಕ ,ಸಂಜೀವ ಗೌಡ,ಶ್ರೀಧರ ಗೌಡ,ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ,ಆಶಾ ಕಾರ್ಯಕರ್ತೆಯರಾದ ಶ್ಯಾಮಲಾ ರೈ, ರತ್ನಾವತಿ ,ಹೇಮಾವತಿ, ಸುಮತಿ,ಸರಸ್ವತಿ,ಬೇಬಿ,ಕೊಳ್ತಿಗೆ ಸಿಎ ಬ್ಯಾಂಕ್ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಭರತ್‌ರಾಜ್ ಕೆ., ಪಾಲ್ತಾಡಿ ಗ್ರಾಮ ಸಹಾಯಕ ಬಾಬು ಬಿ.,ಸುರೇಶ್ ದೋಳ,ಪೊಡಿಯ, ರಾಮಣ್ಣ ರೈ ,ಹಸೀನಾ,ಪ್ರಜ್ವಲ್ ಕೆ.ಆರ್ ಮೊದಲಾದವರಿದ್ದರು.

ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಧುಶ್ರೀ ಸ್ವಾಗತಿಸಿದರು.ಪಾಲ್ತಾಡಿ ಗ್ರಾಮವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ವಂದಿಸಿದರು. ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ. ನಿರೂಪಿಸಿದರು.

LEAVE A REPLY

Please enter your comment!
Please enter your name here