ನಾಳೆ(ಮಾ.22)ಕೇಪುಳು, ಊರಮಾಲ್ ಸಂಪರ್ಕ ರಸ್ತೆಯಲ್ಲಿ ನಿಯಮ ಬಾಹಿರ ಚರಂಡಿ ಕಾಮಗಾರಿ ಖಂಡಿಸಿ ಪ್ರತಿಭಟನೆ

0

ಪುತ್ತೂರು:ನಗರ ಸಭಾ ವ್ಯಾಪ್ತಿಯ ತಾರಿಗುಡ್ಡೆಯಿಂದ ಕೇಪುಳು, ಊರಮಾಲ್ ಸಂಪರ್ಕ ರಸ್ತೆಯಲ್ಲಿ ನಿಯಮ ಬಾಹಿರವಾಗಿ ಚರಂಡಿ ಕಾಮಗಾರಿ ನಡೆಯತ್ತಿರುವುದನ್ನು ಖಂಡಿಸಿ ಮಾ.22ರಂದು ಸ್ಥಳೀಯ ಸಾರ್ವಜನಿಕರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಯಲಿದೆ.

ತಾರಿಗುಡ್ಡೆಯಿಂದ ಕೇಪುಳು ಹಾಗೂ ಊರಮಾಲ್ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನಗರ ಸಭೆಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ.ರಸ್ತೆಯ ಇಕ್ಕೆಲಗಳಲ್ಲಿ 7.50 ಮೀಟರ್ ಅಂತರ ಬಿಟ್ಟು ಚರಂಡಿಗಳನ್ನು ನಿರ್ಮಿಸಬೇಕು ಎಂಬ ನಿಯಮವಿದೆ.

ಆದರೆ ಇಲ್ಲಿ ಎರಡೂ ಬದಿಯಲ್ಲಿ ಜಾಗವಿದ್ದರೂ ಕೇವಲ 5 ಮೀಟರ್ ಅಂತರದಲ್ಲಿ ಚರಂಡಿ ನಿರ್ಮಿಸಲಾಗುತ್ತಿದೆ. ಇದರಂತೆ ರಸ್ತೆ ನಿರ್ಮಾಣವಾದರೆ ಅಗಲ ಕಿರಿದಾಗಲಿದೆ. ಇದರಿಂದಾಗಿ ಮುಂದೆ ಸಮಸ್ಯೆ ಉಂಟಾಗುವ ಸಾಧ್ಯತೆಗಳಿದ್ದು ಕೂಡಲೇ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here