ಬಡಗನ್ನೂರು: ಪಶು ಮೇವು ಬೆಳೆ ಪ್ರಾತ್ಯಕ್ಷಿಕೆ ಮತ್ತು ಸೌಲಭ್ಯಗಳ ಮಾಹಿತಿ ಕಾರ್ಯಗಾರ 

0

ಬಡಗನ್ನೂರು: ಹಾಲು ಉತ್ಪಾದಕ ಒಕ್ಕೂಟ ಹಾಗೂ ಬಡಗನ್ನೂರು ಹಾಲು ಉತ್ಪಾದಕ ಸಹಕಾರಿ ಸಂಘದ ಜಂಟಿ ಆಶ್ರಯದಲ್ಲಿ ಪಶು ಮೇವು ಬೆಳೆಯ ಪ್ರಾತ್ಯಕ್ಷಿಕೆ ಒಕ್ಕೂಟ ಸೌಲಭ್ಯಗಳ ಮಾಹಿತಿ ಇತ್ತೀಚಿಗೆ ಕೈೂಲ ಬಡಗನ್ನೂರು ಶಾಖೆಯ ಆವರಣದಲ್ಲಿ ನಡೆಯಿತು.

ಉ.ವಾ.ದ.ಕ ಹಾ.ಉ.ಒಕ್ಕೂಟದ ಡಾ.ಸತೀಶ್ ರಾವ್ ಗಿಣಿ ಹುಲ್ಲು ಬೆಳೆಯುವ ವಿಧಾನದ ಬಗ್ಗೆ ಮಾಹಿತಿ ನೀಡಿ ಬಳಿಕ ಒಕ್ಕೂಟದ ಸೌಲಭ್ಯಗಳ ಮಾಹಿತಿ ನೀಡಿದರು. ದ.ಕ ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ಮಾಲತಿ ಅಜೋಳ ಬೆಳೆಯುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಡಗನ್ನೂರು ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಮೇಲ್ವಿಚಾರಕಿ ಶ್ರೀದೇವಿ, ಟೆಕ್ನಿಸನ್ ವೇದಾವತಿ, ನಿರ್ದೇಶಕರುಗಳಾದ ಸುಬ್ರಾಯ ನಾಯಕ್ ಮೇಗಿನಮನೆ, ಹೇಮಾಲತಾ ಗೌಡ ಸಂಪಿಗೆಮಜಲು, ಸುಧಾ ಜೆ ಗೌಡ, ಪದ್ಮಾಲತಾ ಯಂ ರೈ ಬಡಕ್ಕಾಯೂರು, ಯಶೋಧ ಕೈೂಲ, ಸದಸ್ಯರುಗಳಾದ ಶಶಿಧರ ಭಟ್ ಕೈೂಲ, ರಾಮಕೃಷ್ಣ ಭಟ್ ಸಿ.ಯಚ್, ಸುಬ್ಬಯ್ಯ ರೈ ಹಲಸಿನಡಿ, ಕಿಶೋರ್ ಭಟ್ ಸಿ.ಯಚ್, ನಯನ ರೈ ಬಡಕ್ಕಾಯೂರು, ರತ್ನಾವತಿ ಕೆಳಗಿನ ಪೇರಾಲು, ಈಶ್ವರ ಮೂಲ್ಯ ಕೈೂಲ, ಪ್ರಾಂಕಿ ಡಿ.ಸೋಜ ಕುದರೆಮಜಲು, ಜಯರಾಮ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬಡಗನ್ನೂರು ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿ ಮೋಹನ್ ಎಂ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here