ಪುಸ್ತಕ ಪ್ರಿಯರಿಗೊಂದು ‘ಪುಸ್ತಕ ಮನೆ’ ; ನಿಮ್ಮ ಇಷ್ಟದ ಪುಸ್ತಕ ಇಲ್ಲಿ ಇದೆಯಾ ನೋಡಿ!

0

ಪುಸ್ತಕ ನಮ್ಮ ಒಬ್ಬ ಉತ್ತಮ ಗೆಳೆಯ.. (A book is our best friend) ‘ಇರುವಂತಿದ್ದರೆ ಪುಸ್ತಕದಂತಿರು., ದೂರದಿಂದ ಕಂಡರೆ ನೀನೇನು ಎಂದು ಅರಿವಾಗದಂತೆ.. ನಿನ್ನ ಅಂತರಾಳ ಓದಿದಾಗಲೇ ಅರ್ಥವಾಗುವಂತೆ, ಮುಖಪುಟದಲ್ಲಿ ಮನ ಸಂಗತಿ ತಿಳಿಯದಂತೆ ಜೊತೆ ಕಳೆದಾಗಲೇ ಪೂರ್ಣ ಮಾಹಿತಿ ದೊರೆಯುವಂತೆ’ ಎಂಬ ಮಾತೊಂದು ಇತ್ತೀಚಿನ ದಿನಗಳಲ್ಲಿ ಬಹಳ ವೈರಲ್ (Viral) ಆಗಿತ್ತು. ಈಗಿನ ಜನರೇಷನ್ ಮಕ್ಕಳಿಗೆ ಪುಸ್ತಕದ ಮೇಲಿನ ಪ್ರೀತಿಗಿಂತ ಆನ್ಲೈನ್ (Online) ಜಗತ್ತಿನ ಮೇಲಿನ ಮೋಹವೇ ಹೆಚ್ಚು! ಆದ್ರೇ ಎಲ್ಲರನ್ನು ಈ ಲಿಸ್ಟ್ ಗೆ ಸೇರಿಸೋವಾಗಿಲ್ಲ ಈಗಲೂ ಪುಸ್ತಕ ಸಂಗ್ರಹ ಹಾಗೂ ಪುಸ್ತಕ ಓದುವ ಹವ್ಯಾಸವನ್ನಿಟ್ಟು ಕೊಂಡವರು ಹಲವರಿದ್ದಾರೆ.

ಪುಸ್ತಕ (book) ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ. ವಿಚಾರಗಳನ್ನು ತಿಳಿದುಕೊಂಡಷ್ಟು ನಮ್ಮ ಆಲೋಚನೆ ಅನುಭವದ ವಿಸ್ತಾರವು ಬೆಳೆಯುತ್ತದೆ. ಒಂದು ಪುಸ್ತಕದ ಒಳತಿರುಳು ವ್ಯಕ್ತಿತ್ವ ಬೆಳೆಸಬಲ್ಲದು, ಜೀವನಕ್ಕೊಂದು ತತ್ವ ನೀಡಬಲ್ಲದು, ಶೂನ್ಯದಿಂದ ಗರಿಷ್ಠ ಮಟ್ಟದವರೆಗೆ ಕೊಂಡೊಯ್ಯುವ ಅಗಾಧ ಶಕ್ತಿ ಪುಸ್ತಕ ಎನ್ನುವ ಕಡಿಮೆ ಪುಟಗಳ ದೀರ್ಘ ಜೀವನಕ್ಕೆ ಸಾರದ ಕೊಂಡಿಯಾಗಿ ನಿಲ್ಲಬಲ್ಲುದು. ಅದಕ್ಕಿರುವ ಶಕ್ತಿಯೇ ಅಂತಹುದು, ಧಾರ್ಮಿಕ, ಶೈಕ್ಷಣಿಕ, ವೈಜ್ಞಾನಿಕ, ರಾಜಕೀಯ, ಪ್ರಸ್ತುತ ಎಲ್ಲವನ್ನೂ ಒಬ್ಬ ಮನುಷ್ಯನಿಗೆ ಜ್ಞಾನವನ್ನು ತುಂಬಿಸಿಕೊಳ್ಳಬಹುದಾದ ಮಾರ್ಗ ಅದು ಪುಸ್ತಕದ ಹಾದಿ. ಎಷ್ಟೇ ಆಧುನಿಕ ತಂತ್ರಜ್ಞಾನಗಳು ಮುಂದುವರೆದರೂ ಇಂದಿಗೂ ಎಂದಿಗೂ ಎಂದೆಂದಿಗೂ ಪುಸ್ತಕದಿಂದ ಪಡೆದ ಜ್ಞಾನವೇ ಸರ್ವಶ್ರೇಷ್ಠ.

ಹೀಗೆ ಪುಸ್ತಕದ ಜ್ಞಾನ ಭಂಡಾರವನ್ನು ಕರಗತ ಮಾಡಿಕೊಂಡಷ್ಟು ಜ್ಞಾನಿಯಾಗಿ ಬೆಳೆಯಲು ಸಾಧ್ಯ. ಈ ಜ್ಞಾನ ಭಂಡಾರವನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡಬೇಕು ಅಂದುಕೊಂಡಿದ್ದರೆ ಅದಕ್ಕೊಂದು ಮಾರ್ಗವೂ ನಮ್ಮ ಬಳಿ ಬೇಕು. ಅದು ಗ್ರಂಥಾಲಯಗಳ ಮೂಲಕವೋ, ಇನ್ನೋರ್ಬರ ಬಳಿ ಕೇಳಿಯೋ ಪಡೆದುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ನಮಗೆ ಬೇಕಾದ ಪುಸ್ತಕಗಳು ಸಿಗುವುದು ಕಡಿಮೆ .ಆ ಸಂದರ್ಭದಲ್ಲಿ ಮುಖ್ಯವೆನಿಸಿದರು. ಲಭ್ಯವಿಲ್ಲದೆ ಪುಸ್ತಕವನ್ನು ಆಯ್ದುಕೊಳ್ಳುವ ಪ್ರಕ್ರಿಯೆಯನ್ನು ಕೈ ಬಿಡುತ್ತೇವೆ. ಇದನ್ನೆಲ್ಲ ಮನಗಂಡ ಸಂಸ್ಥೆಯೊಂದು ಪುಸ್ತಕ ಪ್ರಿಯರಿಗೆ ನಿರಾಸೆಯಾಗದಂತೆ ಹೆಜ್ಜೆಯನ್ನಿರಿಸಿದೆ.

ಯಾವುದೇ ಪುಸ್ತಕಗಳನ್ನು ಕೇಳಿದರೂ ಕೆಲವೇ ದಿನಗಳಲ್ಲಿ ಮನೆಯಂಗಳಕ್ಕೆ ತಲುಪಿಸುವ ಸಂಸ್ಥೆಯಾಗಿ ಬೆಳೆಯುತ್ತಿದೆ. ಯಾವುದೇ ಗ್ರಾಹಕರಿಗೆ ಮೋಸವಾಗದಂತೆ ಪುಸ್ತಕ ಪ್ರೀತಿಯನ್ನು ಇಮ್ಮಡಿಗೊಳಿಸುವಲ್ಲಿಯೂ ಹೆಜ್ಜೆಯನ್ನಿರಿಸಿದ ಸಂಸ್ಥೆ “ಪುಸ್ತಕ ಮನೆ”

ಈ ಪುಸ್ತಕ ಮನೆಯಿರುವುದು ಕಾರ್ಕಳದ ಕುಕ್ಕುಂದೂರು ಜೋಡುರಸ್ತೆಯ Adidhan Durga Enclave ನಲ್ಲಿ.., ಹೆಸರೇ ಹೇಳುವಂತೆ ಇದೊಂದು ಪುಸ್ತಕಗಳ ಮನೆಯೇ, ಯಾಕಂದ್ರೆ ಇಲ್ಲಿ ನಮಗೆ ದೊರಕದ ಪುಸ್ತಕಗಳಿಲ್ಲಾ ಒಂದು ವೇಳೆ ಅವರಲ್ಲಿ ಸ್ಟಾಕ್ ಇಲ್ಲಾಂದ್ರೆ ಬೇರೆ ಕಡೆಗಳಿಂದ ತರಿಸಿ ಕೊಡುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಿದೆ. ಹಾಗಾದ್ರೆ ಪುಸ್ತಕ ಕೊಂಡುಕೊಳ್ಳಲು ನಾವು ಕಾರ್ಕಳಕ್ಕೆ ತೆರಳಬೇಕೇ!? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು.. ಖಂಡಿತಾ ಇಲ್ಲಾ! ನಾವು ಕುಳಿತುಕೊಂಡಲ್ಲಿಗೆಯೇ ಪುಸ್ತಕವನ್ನು ತರಿಸಿಕೊಳ್ಳಬಹುದು.

ಕರೆ ಅಥವಾ ಆನ್ಲೈನ್ ನಲ್ಲಿ ಆರ್ಡರ್ ಮಾಡಿದರೆ ಸಾಕು… ನಮ್ಮ ಮನೆ ಬಾಗಿಲಿಗೆ ಪುಸ್ತಕವನ್ನು ತಲುಪಿಸುವ ಕೆಲಸವನ್ನು ಪುಸ್ತಕ ಮನೆ ಮಾಡುತ್ತಿದೆ.

ಹಾಗಾದ್ರೆ ಇನ್ಯಾಕೆ ತಡ..! ಕೆಳಗೆ 👇👇 ಕೊಟ್ಟಿರುವ ಲಿಂಕ್ (Link) ಮೂಲಕ ನಿಮಗೆ ಓದಲು ಕುತೂಹಲವಿರುವ ಪುಸ್ತಕವನ್ನು ಇಂದೇ ಆರ್ಡರ್ (Order) ಮಾಡಿ… (So why wait any longer..! Order the book you are interested in reading today through the link given below 👇👇…)

https://pustakamane.com/shop-2

ಪುಸ್ತಕ ಮನೆಯ ವಿಳಾಸ (Address of Pustaka Mane)

4-64/12, Adidhan Durga Enclave
Joduraste, Kukkundoor
Karkala, Udupi Dist – 576 117

+91 960647 4289
[email protected]

Open: 9:00AM – Close: 9:00PM

LEAVE A REPLY

Please enter your comment!
Please enter your name here