ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧಿಕಾರ ಸ್ವೀಕಾರ

0

ಪುತ್ತೂರು: ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ 2025-28ನೇ ಸಾಲಿನ ನೂತನ ವ್ಯವಸ್ಥಾಪನಾ ಸಮಿತಿಯಾಗಿ ಆಯ್ಕೆಗೊಂಡ ಅಧ್ಯಕ್ಷರು ಮತ್ತು ಸದಸ್ಯರು ಮಾ.24ರಂದು ಅಧಿಕಾರ ಸ್ವೀಕಾರ ಮಾಡಿದರು.
ದೇವಳದ ಅಡಳಿತಾಧಿಕಾರಿಯಾಗಿರುವ ಬನ್ನೂರು ಗ್ರಾ.ಪಂ ಗ್ರಾಮ ಆಡಳಿತಾಧಿಕಾರಿ ಶರಣ್ಯ ಅವರು ದೇವಳದ ವರದಿ ಪತ್ರಗಳನ್ನು ನೂತನ ಸಮಿತಿಗೆ ಹಸ್ತಾಂತರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಧರ್ಣಪ್ಪ ಮೂಲ್ಯ, ಪ್ರಧಾನ ಅರ್ಚಕ ಶಿವಪ್ರಸಾದ್ ಭಟ್, ವಿನೋದ್ ಕುಮಾರ್, ರೇವತಿ ಶೆಟ್ಟಿ, ಸುಮಲತಾ ಎನ್, ಚಂದ್ರಾಕ್ಷ ಬಿ.ಎನ್, ಮಹಾಬಲ ಪೂಜಾರಿ, ಜಿ.ಬಾಲಕೃಷ್ಣ ಗೌಡ, ಬಿ.ದಯಾನಂದ ಬನ್ನೂರು ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವಾನಾಥ ರೈ ಮೇಗಿನಗುತ್ತು, ನಿಕಟಪೂರ್ವ ಆಡಳಿತ ಮೊಕ್ತೇಸರ ರಾಮಣ್ಣ ಗೌಡ ಹಲಂಗ, ಮೌನಿಷ ಆನೆಮಜಲು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here