ನಿಡ್ಪಳ್ಳಿ :ಬೆಟ್ಟಂಪಾಡಿ ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್ ಮತ್ತು ಶ್ರೀ ಕೃಷ್ಣ ಹಾಗೂ ಶಾಂತದುರ್ಗಾ ಸಂಜೀವಿನಿ ಒಕ್ಕೂಟಗಳ ವತಿಯಿಂದ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವಠಾರದಲ್ಲಿ ಮಾ.24 ರಂದು ಸಂಜೀವಿನಿ ಸಂತೆ ನಡೆಯಿತು.
ಸಂಜೀವಿನಿ ಒಕ್ಕೂಟದ ಸದಸ್ಯೆಯರು ತಯಾರಿಸಿದ ದಿನಬಳಕೆ ವಸ್ತುಗಳು, ಆಹಾರ ಪದಾರ್ಥಗಳು ಹಾಗೂ ಸಾವಯವ ತರಕಾರಿಗಳು ಸಂತೆಯಲ್ಲಿ ಮಾರಾಟ ಮಾಡಿದರು. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿತು.
ಎನ್.ಅರ್.ಎಲ್.ಎಮ್ ವಲಯ ಮೆಲ್ವೀಚಾರಕಿ ನಳಿನಾಕ್ಷಿ , ಬೆಟ್ಟಂಪಾಡಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಚೈತ್ರಾ,ನಿಡ್ಪಳ್ಳಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಭವ್ಯಾ.ಬಿ, ನಿಡ್ಪಳ್ಳಿ ಕೃಷಿ ಸಖಿ ಹೇಮಾವತಿ, ಬೆಟ್ಟಂಪಾಡಿ ಕೃಷಿ ಸಖಿ ಸೌಮ್ಯ, ಪಶುಸಖಿ ಉಮಾವತಿ, ಎಲ್.ಸಿ.ಅರ್.ಪಿ ಶಾಲಿನಿ ಮತ್ತೀತರರು ಉಪಸ್ಥಿತರಿದ್ದರು.