ಇಂದಿನ ಕಾರ್ಯಕ್ರಮ (25/03/2025)

0

ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ಲಯನ್ ಸೇವಾ ಮಂದಿರದಲ್ಲಿ ಬೆಳಿಗ್ಗೆ ೮.೩೦ರಿಂದ ಪುತ್ತೂರು ತಾಲೂಕು ಸವಿತಾ ಸಮಾಜದ ವಾರ್ಷಿಕ ಮಹಾಸಭೆ
ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ಬೆಳಿಗ್ಗೆ ೧೦ರಿಂದ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ
ಪುತ್ತೂರು ನಗರಸಭಾ ಕಛೇರಿ ಸಭಾ ಭವನದಲ್ಲಿ ಬೆಳಿಗ್ಗೆ ೧೧ರಿಂದ ನಗರಸಭೆಯ ಸಾಮಾನ್ಯ ಸಭೆ
ಮರೀಲ್ ದಿ ಪುತ್ತೂರು ಕ್ಲಬ್‌ನಲ್ಲಿ ಬೆಳಿಗ್ಗೆ ೭.೩೦ರಿಂದ ಟೆನ್ನಿಸ್ ಶಿಬಿರ, ಜಿಮ್ ತರಬೇತಿ ಪ್ರಾರಂಭ
ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಐತ್ತೂರು ಗ್ರಾ.ಪಂ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೧ಕ್ಕೆ ಸಾಮಾನ್ಯ ಸಭೆ
ಅನಂತಾಡಿ ಗ್ರಾ.ಪಂ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೧ಕ್ಕೆ ಗ್ರಾಮಸಭೆ
ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೬.೩೦ಕ್ಕೆ ಅರ್ಧ ಏಕಾಹ ಭಜನೆ, ೧೦ಕ್ಕೆ ಹೊರೆ ಕಾಣಿಕೆ ಸಮರ್ಪಣೆ, ಸ್ವಚ್ಛತೆ, ಅಲಂಕಾರ ಸೇವೆ, ಸಂಜೆ ೫ಕ್ಕೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ೬ರಿಂದ ದೇವತಾ ಪ್ರಾರ್ಥನೆ, ವಾಸ್ತುಬಲಿ, ರಾಕ್ಷೆಘ್ನ ಹೋಮ, ೭ರಿಂದ ಕುಣಿತ ಭಜನೆ, ರಾತ್ರಿ ೮ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ರಾತ್ರಿ ೭.೩೦ರಿಂದ ನಾಗ ಮಾಣಿಕ್ಯ ಪೌರಾಣಿಕ ನಾಟಕ, ೮ಕ್ಕೆ ಕದಿಕ್ಕಾರುಬೀಡಿನಿಂದ ಭಂಡಾರ ಬಂದು ದೇವಳದ ಸಂತೆಮಜಲಿನಲ್ಲಿ ದೊಂಪದ ಬಲಿ ನೇಮೋತ್ಸವ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಕಾಳಿಕಾಂಬ ವೇದಿಕೆಯಲ್ಲಿ ರಾತ್ರಿ ೭.೩೦ರಿಂದ ಗಯಾಪದ ಕಲಾವಿದೆರ್ ವತಿಯಿಂದ ಗಯಾಪದ ರಂಗ ಸಂಭ್ರಮ
ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ದೇವರ ಬಲಿ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ೭ರಿಂದ ತಾಯಂಬಕ ಸೇವೆ, ನಡುದೀಪೋತ್ಸವ, ಉತ್ಸವ ಬಲಿ, ೮.೩೦ರಿಂದ ನೃತ್ಯ ಸಮೂಹ
ಟಿವೀರಮಂಗಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಬೆಳಿಗ್ಗೆ ೬ಕ್ಕೆ ಕೊರಗಜ್ಜ ದೈವದ ಭಂಡಾರ ತೆಗೆಯುವುದು, ೭ಕ್ಕೆ ಕೊರಗಜ್ಜ ದೈವಗಳ ನೇಮೋತ್ಸವ
ಕಡಬ ಪಣೆಮಜಲು ಶ್ರೀ ಮಲೆ ಉಳ್ಳಾಕ್ಲು, ಶ್ರೀ ಮಲೆಚಾಮುಂಡಿ, ಶ್ರೀ ಪುರುಷ ದೈವ, ಸಪರಿವಾರ ದೈವಗಳು, ಕಡಬದ ಪಂಜುರ್ಲಿ ದೈವಗಳ ನೇಮೋತ್ಸವ
ಪುತ್ತೂರು ತಾರಿಗುಡ್ಡೆಯಲ್ಲಿ ಸಾರ್ವಜನಿಕ ನಾಗಬನ ಸೇವಾ ಸಮಿತಿಯಿಂದ ಸಂಜೆ ೬ಕ್ಕೆ ಗುಳಿಗ ದೈವಕ್ಕೆ ಕೋಳಿ ಸಮರ್ಪಣೆ
ಎರುಂಬು ಸಿಂಹಮೂಲೆ ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಭರಣಿ ಮಹೋತ್ಸವ, ಮಧ್ಯಾಹ್ನ ೧೧ರಿಂದ ಭಜನೆ, ೧೨ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೬ರಿಂದ ಭಜನೆ, ರಾತ್ರಿ ೭ಕ್ಕೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಭೇಟಿ, ಅನ್ನಸಂತರ್ಪಣೆ

LEAVE A REPLY

Please enter your comment!
Please enter your name here