ಕಾಣಿಯೂರು: ಸ ಹಿ ಪ್ರಾ ಶಾಲೆ ನಾಣಿಲದಲ್ಲಿ 7ನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮವು ನಡೆಯಿತು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿಯವರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯಗುರು ಪದ್ಮಯ್ಯ ಗೌಡ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶೋಭಾ ಬಾಕಿಲ ಹಾಗೂ ವಿದ್ಯಾರ್ಥಿ ನಾಯಕಿ ಅಸ್ಮಿತ ಉಪಸ್ಥಿತರಿದ್ದರು. ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಗ್ರೈಂಡರ್ ಕೊಡುಗೆಯಾಗಿ ನೀಡಿದರು. 6ನೇ ತರಗತಿಯ ಮಕ್ಕಳು ಕಾರ್ಯಕ್ರಮವನ್ನು ನಿರೂಪಿಸಿದರು.