ವಿಟ್ಲ: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕನ್ನಡ ಗ್ರಾಮ ಕಾಸರಗೋಡು, 35ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ನೀಡಲಿರುವ ಡಾ ಎಂ.ಜಿ.ಆರ್ ಅರಸ್ ಚುಟುಕು ಕಾವ್ಯ ಪ್ರಶಸ್ತಿಗೆ ಯುವಕವಿ ಶಶಿಧರ ಏಮಾಜೆ ಆಯ್ಕೆಯಾಗಿದ್ದಾರೆ.
ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಾ.27ರಂದು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನ ರಜತಾ ಮಹೋತ್ಸವ -2025, ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.