ನೆಲ್ಯಾಡಿ: ಮಾ.27ರಂದು ಸಂಜೆ ನೆಲ್ಯಾಡಿ ಮತ್ತು ಕೊಕ್ಕಡ ಭಾಗದಲ್ಲಿ ಭಾರೀ ಮಳೆಯಾಗಿದ್ದು ನೆಲ್ಯಾಡಿಯಲ್ಲಿ ಸಿಡಿಲು ಬಡಿದ ಪರಿಣಾಮ ತೆಂಗಿನಮರವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ನೆಲ್ಯಾಡಿ, ಕೊಕ್ಕಡ ಭಾಗದಲ್ಲಿ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣವಿದ್ದು ಸಂಜೆ 5 ಗಂಟೆಯಿಂದ ಮಿಂಚು-ಸಿಡಿಲಿನೊಂದಿಗೆ ಭಾರೀ ಮಳೆಯಾಗಿದೆ. ಸುಮಾರು 1 ತಾಸಿಗೂ ಹೆಚ್ಚು ಸಮಯ ಭಾರೀ ಮಳೆಯಾಗಿದ್ದು ಸುಡು ಬಿಸಿಲಿನಿಂದ ಕಾದಿದ್ದ ಭೂಮಿ ತಂಪಾಗಿದೆ. ನೆಲ್ಯಾಡಿ ಪೇಟೆಯಲ್ಲಿರುವ ಸುಬ್ರಹ್ಮಣ್ಯ ವಿಲಾಸ ಹೋಟೆಲ್‌ನ ಹಿಂಬದಿಯ ಸುಬ್ರಹ್ಮಣ್ಯ ಆಚಾರ್‌ರವರ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ತೆಂಗಿನ ಮರದಲ್ಲಿ ಬೆಂಕಿ ಕಾಣಿಸಿಕೊಂಡಿದೆ.