ತೆಕ್ಕಾರು: ಅಕ್ರಮವಾಗಿ ಮದ್ಯ ಮಾರಾಟಕ್ಕೆ ಯತ್ನ-ಮದ್ಯ, ಆರೋಪಿ ವಶ

0

ಪುತ್ತೂರು: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಕುಟ್ಟಿಕಳ ಬಸ್‌ನಿಲ್ದಾಣದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಆರೋಪಿಯನ್ನು ಹಾಗೂ ಆತನದಲ್ಲಿ ಮದ್ಯವನ್ನು ಉಪ್ಪಿನಂಗಡಿ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಮಾ.27ರಂದು ಸಂಜೆ ನಡೆದಿದೆ.


ತೆಕ್ಕಾರು ಗ್ರಾಮದ ಕುಟ್ಟಿಕಳ ನಿವಾಸಿ ಗಣೇಶ್(34ವ.)ಬಂಧಿತ ಆರೋಪಿ.

ಈತ ತೆಕ್ಕಾರು ಗ್ರಾಮದ ಕುಟ್ಟಿಕಳ ಎಂಬಲ್ಲಿರುವ ಬಸ್‌ಸ್ಟ್ಯಾಂಡ್‌ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ 90 ಎಂ.ಎಲ್‌ನ ಮೈಸೂರು ಲ್ಯಾನ್ಸ್‌ರ್ ಎಂಬ ಹೆಸರಿನ 30 ಟೆಟ್ರಾ ಪ್ಯಾಕೆಟ್‌ಗಳನ್ನು ವಶದಲ್ಲಿಟ್ಟು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದನ್ನು ಇಲಾಖಾ ವಾಹನದಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕರಾದ ಮನಿಶಾ ಎಂ.,ಅವರು ಪತ್ತೆ ಹಚ್ಚಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ಈತನಿಂದ 12೦೦ ರೂ.ಮೌಲ್ಯದ 2.7 ಲೀಟರ್ ಮದ್ಯವನ್ನು ಮಹಜರು ಮುಖೇನ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here