ಉಪ್ಪಿನಂಗಡಿ: ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾಗಿ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ನೇತ್ರಾವತಿ ನದಿ ದಡದ ಪ್ರಾಕೃತಿಕ ಸೊಬಗಿನ ನಡುವೆ ತಲೆ ಎತ್ತಿರುವ ಆಶ್ರಯ ರೆಸಾರ್ಟ್ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಾ.27ರಂದು ಶುಭಾರಂಭಗೊಂಡಿತು.

ಸಂಸ್ಥೆಯ ಮಾಲಕ ಉದ್ಯಮಿ ಹರೀಶ್ ಶೆಟ್ಟಿ ಮಾತನಾಡಿ, ನೇತ್ರಾವತಿ ನದಿ ದಡದ ರಮಣೀಯ ಸ್ಥಳದಲ್ಲಿ ನಿರ್ಮಾಣಗೊಂಡಿರುವ ಈ ಆಶ್ರಯ ರೆಸಾರ್ಟ್ ಹವಾನಿಯಂತ್ರಿತ ವಸತಿಗಳನ್ನು ಒಳಗೊಂಡ ಲಾಡ್ಜಿಂಗ್ , ಬಾರ್ ರೆಸ್ಟೋರೆಂಟ್, ವೆಜ್ ರೆಸ್ಟೋರೆಂಟ್ , ಮಿನ್ ಹಾಲ್, ಕಲ್ಯಾಣ ಮಂಟಪ, ಸಣ್ಣ ಹಾಗೂ ದೊಡ್ಡ ಗಾತ್ರದ ಈಜು ಕೊಳ, ಒಳಕ್ರೀಡಾಂಗಣ ಮಕ್ಕಳ ಮನೋರಂಜನಾ ವಿಭಾಗಗಳನ್ನು ಹೊಂದಲಿದ್ದು, ಪರಿಪೂರ್ಣ ಮನೋರಂಜನಾ ತಾಣವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಪ್ರವಾಸಿಗರ ಪಾಲಿಗೆ ಕೈಗೆಟಕುವ ದರದಲ್ಲಿ ವಿರಾಮ ಹಾಗೂ ಮನರಂಜನೆಯನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಆಶ್ರಯ ರೆಸಾರ್ಟ್ ನ್ನು ನಿರ್ಮಿಸಲಾಗಿದ್ದು, ದ.ಕ ಜಿಲ್ಲೆಯನ್ನು ಪ್ರವಾಸೋದ್ಯಮದ ನೆಲೆಗಟ್ಟಿನಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಗೆ ಪೂರಕವಾಗಿ ಈ ರೆಸಾರ್ಟ್ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಸುಸಜ್ಜಿತ ಕಲ್ಯಾಣಮಂಟಪವನ್ನು ನಿರ್ಮಿಸಲಾಗಿ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಪ್ರಸಕ್ತ ತಾಣವಾಗಿಯೂ ಜನಾಕರ್ಷಣೆಗೆ ಒಳಗಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀರಾಮ ಶಾಲಾ ಸಂಚಾಲಕ ಯು ಜಿ ರಾಧಾ, ಶ್ರೀ ಮಾಧವ ಶಿಶು ಮಂದಿರದ ಕಂಗ್ವೆ ವಿಶ್ವನಾಥ ಶೆಟ್ಟಿ, ಗೆಳೆಯರು 94 ಸಂಘಟನೆಯ ಗುಣಕರ ಅಗ್ನಾಡಿ, ಜಿಲ್ಲಾ ಗೋ ರಕ್ಷಾ ಪ್ರಮುಖ್ ಮಹೇಶ್ ಬಜತ್ತೂರು, ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ರವೀಂದ್ರ ಇಳಂತಿಲ, ಮಾಣಿಯ ಸಹಕಾರಿ ಸಂಸ್ಥೆಯ ಮುಂದಾಳು ಪುಷ್ಪರಾಜ್ ಚೌಟ , ರವಿ ಶೆಟ್ಟಿ, ಭವ್ಯ, ಯಮುನಾ, ಪ್ರಮೀಳಾ, ಕೆ ರಾಧಾಕೃಷ್ಣ ನಾಯ್ಕ್ , ಪ್ರಕಾಶ್ ಭಟ್ ಉರಿಮಜಲು, ಚಂದ್ರಶೇಖರ್ ತಾಳ್ತಜೆ, ಪಿಡಿಒ ಪ್ರವೀಣ್, ಪ್ರಸೀಲಾ, ನ್ಯಾಯವಾದಿ ಸಂದೇಶ್ ನಟ್ಟಿಬೈಲ್, ಕಿಶೋರ್ ನೀರಕಟ್ಟೆ, ಕಿರು ಸಾಕ್ಷ್ಯ ಚಿತ್ರ ನಿರ್ಮಾಪಕ ಅಚಲ್ ಉಬರಡ್ಕ, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಪಾಲುದಾರರಾದ ಮೀರಾ ಸ್ವಾಗತಿಸಿ , ಅಮೃತ ಶೆಟ್ಟಿ ವಂದಿಸಿದರು. ರಕ್ಷಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.