ಪುತ್ತೂರು:ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಸ್ ಹಾಗೂ ಜೀರ್ಣೋದ್ಧಾರ ಸಮಿತಿಯ ವತಿಯಿಂದ ನಿಡ್ಪಳ್ಳಿ ಗ್ರಾಮದ ಕತ್ತಲಕಾನ ಎಂಬಲ್ಲಿ ನಿರ್ಮಾಣವಾಗಲಿರುವ ಕೆಂಪು ಕೇಪುಲಾಜೆ ಬೆಮ್ಮೆರ ಗುಂಡ ಮತ್ತು ಮೊಗೇರ ದೈವಸ್ಥಾನದ ಪುನರ್ ನಿರ್ಮಾಣಗಳಿಗೆ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ಮಾ.30ರಂದು ನಿಡ್ಪಳ್ಳಿಯ ಬ್ರಹ್ಮರಗುಂಡದಲ್ಲಿ ಬಿಡುಗಡೆಗೊಂಡಿತು.
ನಿಡ್ಪಳ್ಳಿ ಗ್ರಾ.ಪಂ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ತಾ.ಪಂ ಮಾಜಿ ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿರುವ ರಾಧಾಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಕೇಪುಳು, ಉಪಾಧ್ಯಕ್ಷ ಶೇಖರ ಮಾಡಾವು, ಸಂಚಾಲಕ ವಿಜಯ ವಿಕ್ರಮ್ ರಾಮಕುಂಜ, ಹರೀಶ್ ಬೋರ್ಕರ್, ದಿವಾಕರ ಬೋರ್ಕರ್, ಶಂಕರಾನಂದ ಬೋರ್ಕರ್, ಪ್ರಕಾಶ್ ಬೋರ್ಕರ್, ನಿತ್ಯಾನಂದ ಬೋರ್ಕರ್, ರಾಜೀವಿ, ಸುಚರಿತಾ, ಪಲ್ಲವಿ ನಿರಂಜನ ಬೋರ್ಕರ್ ಮೊದಲಾದವರು ಉಪಸ್ಥಿತರಿದ್ದರು.