ಪುತ್ತೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಬ್ರಹ್ಮಕಲಶೋತ್ಸವದ ಪುತ್ತೂರು ಸಮಿತಿಯ ನೇತೃತ್ವದಲ್ಲಿ ಹಸಿರು ಹೊರೆಕಾಣಿಕೆಯು ಮಾ.30ರಂದು ಸಮರ್ಪಣೆಗೊಂಡಿತು.
ತಾಲೂಕಿನ ವಿವಿಧ ಭಾಗಗಳಿಂದ ಸಂಗ್ರಹಗೊಂಡ ಹಸಿರು ಹೊರೆಕಾಣಿಕೆಯು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಕ ಶಾರದಾ ಭಜನಾ ಮಂದಿರದಲ್ಲಿ ಜಮಾವಣೆಗೊಂಡು ಮಾ.30ರಂದು ಸಂಜೆ ದೇವಸ್ಥಾನದ ಮುಂಭಾಗದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಸಂತ ಕುಮಾರ್ ಕೆದಿಲಾಯವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಬ್ರಹ್ಮಕಲಶೋತ್ಸವದ ಪುತ್ತೂರು ಸಮಿತಿ ಗೌರವಾಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.
ಪುತ್ತೂರು ಸಮಿತಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಕಾರ್ಯದರ್ಶಿ ಸುಧೀರ್ ಕಲ್ಲಾರೆ, ಸಂಚಾಲಕ ಗಿರೀಶ್, ಶಾರದಾ ಭಜನಾ ಮಂದಿರ ಗೌರವಾಧ್ಯಕ್ಷ ಕೆದಂಬಾಡಿ ಗುತ್ತು ಸೀತರಾಮ ರೈ, ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಮಾಧವ ಸ್ವಾಮಿ ಕಲಾಮಂದಿರ, ಯಶವಂತ ಆಚಾರ್ಯ, ನಿತ್ಯ ಕರಸೇವಕರ ತಂಡದ ಕೃಷ್ಣಪ್ಪ, ಜಯಕಿರಣ, ವೇದರಾಜ್, ಯೋಗಾನಂದ, ರಾಮಚಂದ್ರ ಘಾಟೆ, ಶಿವಾನಂದ ಪ್ರಭು, ಪ್ರಕಾಶ್, ಪವನ್, ಗಣೇಶ್ ಪೈ, ಮಂಜುನಾಥ ಭಂಡಾರ್ಕಾರ್, ಕಿರಣ ಶಂಕರ ಮಲ್ಯ, ದೇವಿಪ್ರಸಾದ್ ಮಲ್ಯ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಭಾಗವಹಿಸಿದ್ದರು.