ಪುತ್ತೂರು : ಇಲ್ಲಿನ ಮುಖ್ಯರಸ್ತೆಯಲ್ಲಿರುವ ಮಹಾವೀರ ಮೆಡಿಕಲ್ ಸೆಂಟರ್‌ನಲ್ಲಿ ಕಾರ್ಡಿಯೋ ಪಲ್ಮನರಿಗೆ (ಹೃದಯಕ್ಕೆ ಸಂಬಂಧಪಟ್ಟ) ಸಮಸ್ಯೆಗಳನ್ನು ತತ್‌ಕ್ಷಣ ಅಥವಾ ಮುಂಜಾಗರುಕತೆಯಿಂದ ಪ್ರಾಣಕ್ಕೆ ಅಪಾಯವಾಗದಂತೆ ತಡೆಯುವುದು ಹೇಗೆ ಎಂಬುದರ ಬಗ್ಗೆ ಡಾ. ಪ್ರೀತಿ ರಾಜ್ ಬಲ್ಲಾಳ್ ಮತ್ತು ಡಾಕ್ಟರ್ ಸುರೇಶ್ ಪುತ್ತುರಾಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾತ್ಯಕ್ಷಿಕೆಯೊಂದಿಗೆ ತೋರಿಸಿಕೊಟ್ಟರು.
ಅಲ್ಲದೆ ಬೆಂಕಿ ಮತ್ತು ವಿದ್ಯುಚ್ಛಕ್ತಿಯಿಂದ ಉಂಟಾಗುವ ಅನಾಹುತಕ್ಕೆ ಪರಿಹಾರಗಳ ಬಗ್ಗೆಯೂ ವಿವರಿಸಲಾಯಿತು. ಈ ಸಂದರ್ಭದಲ್ಲಿ ಡಾಕ್ಟರ್ ಅಶೋಕ್ ಪಡಿವಾಳ್, ಮೆಸ್ಕಾಂ ಉದ್ಯೋಗಿಗಳು, ನರ್ಸಿಂಗ್ ಸ್ಟಾಫ್ ಮತ್ತು ಫಲಾರ ಹೋಟೆಲಿನ ನೌಕರ ವೃಂದದವರು ಉಪಸ್ಥಿತರಿದ್ದರು.