ಜೇಸಿಐ ಉಪ್ಪಿನಂಗಡಿ ಘಟಕದ ಸಾಮಾನ್ಯ ಸಭೆ- ಸದಸ್ಯರಿಗೆ ತರಬೇತಿ

0

ಜೇಸಿಐಯು ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಮೋಹನಚಂದ್ರ


ಉಪ್ಪಿನಂಗಡಿ: ಅಂತಾರಾಷ್ಟ್ರೀಯ ಜೇಸಿಐ ಸಂಸ್ಥೆಯು ಯುವಜನತೆಗೆ ವೇದಿಕೆ ಕಲ್ಪಿಸಿ ಧೈರ್ಯ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇಂತಹ ವೇದಿಕೆಯನ್ನು ಬಳಸಿಕೊಂಡು ಅತ್ಯುತ್ತಮವಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಮುಂದಾಗಬೇಕೆಂದು ಉಪನ್ಯಾಸಕ ಮತ್ತು ವಲಯ 15ರ ವಲಯಾಧಕಾರಿ ಮೋಹನ್ ಚಂದ್ರ ತೋಟದ ಮನೆ ಹೇಳಿದರು.


ಜೇಸಿಐ ಉಪ್ಪಿನಂಗಡಿ ಘಟಕದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ತರಬೇತಿ ನೀಡಿ ಅವರು ಮಾತನಾಡುತ್ತಿದ್ದರು. ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ನಟೇಶ್ ಪೂಜಾರಿ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಜೇಸಿಐ ನಿಕಟಪೂರ್ವ ಅಧ್ಯಕ್ಷರಾದ ಲವೀನಾ ಪಿಂಟೊ, ಜೇಸಿಐ ಉಪ್ಪಿನಂಗಡಿ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ, ಪೂರ್ವವಲಯಾಧಿಕಾರಿ ಶೇಖರ್ ಗೌಂಡತ್ತಿಗೆ, ಜಯಾನಂದ ಉಪಸ್ಥಿತರಿದ್ದರು.


ಗಣೇಶ್ ಜೇಸಿವಾಣಿ ವಾಚಿಸಿದರು. ಘಟಕದ ಕಾರ್ಯದರ್ಶಿ ಜೇಸಿ ಮಹೇಶ್ ವರದಿ ಮಂಡಿಸಿದರು.

LEAVE A REPLY

Please enter your comment!
Please enter your name here