ಪುತ್ತೂರು: ಶ್ರೀ ಸಾಯಿಕಲಾ ಯಕ್ಷ ಬಳಗ ಡಾ. ಶಿವರಾಮ ಕಾರಂತ ಬಾಲವನ ಪುತ್ತೂರು ತಾಳಮದ್ದಳೆ ತಂಡ ಉದ್ಘಾಟನಾ ಸಮಾರಂಭ ಮತ್ತು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಮಾಣಿಯ ಬುಡೋಳಿ ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ನಡೆಯಿತು.
ಶ್ರೀ ಸಾಯಿಕಲಾ ಯಕ್ಷ ಬಳಗ ಡಾ. ಶಿವರಾಮ ಕಾರಂತ ಬಾಲವನ ಪುತ್ತೂರು ಯಕ್ಷಗಾನ ತಂಡ ಸಂಚಾಲಕಿ ಪ್ರೇಮಾ ಕಿಶೋರ್ ಪ್ರಸ್ತಾವನೆಗೈದರು. ಹಿರಿಯ ಯಕ್ಷಗಾನ ಕಲಾವಿದ ಪ್ರಸಂಗಕರ್ತರು ಡಾ ತಾರಾನಾಥ ವರ್ಕಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಸ್ಯಮಂತಕ ರತ್ನ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳ ಭಾಗವತರಾಗಿ ರಚನಾ ಜಿದ್ಗಲ್, ಚೆಂಡೆ- ಮದ್ದಳೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು, ಶ್ರೀ ಹರಿಪ್ರಸಾದ್ ಇಚಿಲಂಪಾಡಿ,ಚಕ್ರತಾಳದಲ್ಲಿ ಗಗನ್ ಪಂಜ, ಮುಮ್ಮೇಳ ಸತ್ರಾರ್ಜಿತದಲ್ಲಿ ಪ್ರಚೇತ್ ಆಳ್ವ ಬಾರ್ಯ, ಪ್ರಸೇನ : ಪೃಥ್ವಿ ಕಾಟುಕುಕ್ಕೆ, ನಾರದನಾಗಿ ಆಜ್ಞಾ ಸೋಹಮ್, ಬಲರಾಮನಾಗಿ ಸಂದೀಪ್ ಕಲ್ಲಂಗಳ, ಜಾಂಬವಂತನಾಗಿ ರೇಣುಕಾ ಚೇತನ್, ಜಾಂಬವ ಪ್ರೇಮಾ ಕಿಶೋರ್ ಕಾಣಿಸಿಕೊಂಡರು.