ಆತೂರು ದೇವಸ್ಥಾನದ ವಾರ್ಷಿಕ ಜಾತ್ರೆ- ಶ್ರೀ ದುಗಲಾಯಿ ದೈವದ ನೇಮೋತ್ಸವ

0

ರಾಮಕುಂಜ: ಮಾ.29ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೆ ಎ.2ರಂದು ರಾತ್ರಿ ಧ್ವಜಾವರೋಹಣದೊಂದಿಗೆ ಸಂಪನ್ನಗೊಂಡಿದ್ದು ಎ.3ರಂದು ಶ್ರೀ ದುಗಲಾಯಿ ದೈವದ ನೇಮೋತ್ಸವ ನಡೆಯಿತು.


ಎ.2ರಂದು ಪೂರ್ವಾಹ್ನ ಬಾಗಿಲು ತೆರೆಯುವ ಮುಹೂರ್ತ, ಮಹಾಪೂಜೆ ನಡೆಯಿತು. ರಾತ್ರಿ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆಯಲ್ಲಿ ಕಟ್ಟೆಪೂಜೆ, ಕೊಯಿಲ ಶಾಲೆಯಿಂದಾಗಿ ನೀಲಮೆ ಶ್ರೀ ಮಹಾವಿಷ್ಣು ದೇವಸ್ಥಾನ, ಕುರೋಳಿಕೆ ಮೂಲಕ ಕುಮಾರಧಾರದ ಸುದೆಂಗಳದವರೆಗೆ ಪೇಟೆ ಸವಾರಿ, ಕಟ್ಟೆಪೂಜೆಗಳು, ಗುಳಿಗ ಮತ್ತು ಪಂಜುರ್ಲಿ ದೈವಗಳ ನುಡಿಕಟ್ಟುಗಳು, ಅವಭೃತೋತ್ಸವ ನಡೆದು ರಾತ್ರಿ ದೇವಸ್ಥಾನದಲ್ಲಿ ಧ್ವಜಾವರೋಹಣ, ಮಂತ್ರಾಕ್ಷತೆ ನಡೆಯಿತು. ಎ.3ರಂದು ಬೆಳಿಗ್ಗೆ ಸಂಪ್ರೋಕ್ಷಣೆ, ಪೂರ್ವಾಹ್ನ ದುಗಲಾಯಿ ದೈವದ ನೇಮೋತ್ಸವ ನಡೆಯಿತು. ಮಧ್ಯಾಹ್ನ ರಾಮಕುಂಜ ಆತೂರು ಲಕ್ಷ್ಮೀ ಗ್ಲಾಸ್, ಪ್ಲೈವುಡ್, ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ವರ್ಕ್ಸ್ ಮಾಲಕ ಸುಂದರ ನಾಯ್ಕ ಚೆಕ್ಕಿತ್ತಡ್ಕರವರ ಸೇವಾರ್ಥವಾಗಿ ಅನ್ನಸಂತರ್ಪಣೆ ನಡೆಯಿತು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ ಆರುವಾರ ಬಾಳಿಕೆ, ಸದಸ್ಯರಾದ ಯತೀಶ್ ಗುಂಡಿಜೆ, ಸುನೀತ್‌ರಾಜ್ ಶೆಟ್ಟಿ ಆರುವಾರ ಬಾಳಿಕೆ, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಸಂಜೀವ ಸುದೆಂಗಳ, ಗೋಪಾಲ ನಾಯ್ಕ ಸಿಗೆತ್ತಡಿ, ಸುಜಾತ ಜೆ.ಶೆಟ್ಟಿ ಬಡಿಲ, ಮೀನಾಕ್ಷಿ ಕೆ.ಮುಂಡೈಮಾರು, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಉತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಕೊರಿಕ್ಕಾರು, ಉಪಾಧ್ಯಕ್ಷರಾದ ಪಾಂಡೇಲುಗುತ್ತು ಚಂದ್ರಹಾಸ ರೈ ಬುಡಲೂರು, ಶೀನಪ್ಪ ಗೌಡ ಪಲ್ಲಡ್ಕ, ರಾಜೀವ ಗೌಡ ಪೊಸಲಕ್ಕೆ, ಮೋಹನದಾಸ್ ಶೆಟ್ಟಿ ಬಡಿಲ, ಮುರಳಿಕೃಷ್ಣ ಬಡಿಲ, ಪ್ರಧಾನ ಕಾರ್ಯದರ್ಶಿ ವಿನೋದ್‌ಕುಮಾರ್ ಪಲ್ಲಡ್ಕ, ಕಾರ್ಯದರ್ಶಿಗಳಾದ ಶಾಂತರಾಮ ಗೌಡ ಬೇಂಗದಪಡ್ಪು, ದಾಮೋದರ ಪುಣ್ಕೆತ್ತಡಿ, ಜ್ಯೋತಿ ಕಲ್ಕಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೊರಗಪ್ಪ ಗೌಡ ಮುಂಡೈಮಾರ್, ಶ್ರೀನಿವಾಸ ಗೌಡ ಪಲ್ಲಡ್ಕಪಟ್ಟೆ, ವಿಶ್ವನಾಥ ಗೌಡ ಪುತ್ಯೆ, ರಘುನಾಥ ಶೆಟ್ಟಿ ಕಲ್ಕಾಡಿ, ಸೋಮನಾಥ ಗೌಡ ಪಲ್ಲಡ್ಕ, ಶ್ರೀರಾಮ ಕೆಮ್ಮಾರ, ವಸಂತಕುಮಾರ್ ಪೊಸಲಕ್ಕೆ, ಅಭಿವೃದ್ಧಿ ಸಮಿತಿ ಸಲಹೆಗಾರ ಕೇಶವ ಅಮೈ ಕಲಾಯಿಗುತ್ತು, ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಪ್ರಧಾನ ಕಾರ್ಯದರ್ಶಿ ಚೇತನ್ ಆನೆಗುಂಡಿ, ಉಪಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ಕಾರೆಗುಡ್ಡೆ, ಭವಾನಿಶಂಕರ ಪರಂಗಾಜೆ, ರಾಮ ನಾಯ್ಕ್ ಏಣಿತ್ತಡ್ಕ, ಬಾಲಕೃಷ್ಣ ಗೌಡ ಬೇಂಗದಪಡ್ಪು, ಕಾರ್ಯದರ್ಶಿಗಳಾದ ಶಶಿಕುಮಾರ್ ಅಂಬಾ, ರಾಧಾಕೃಷ್ಣ ತುಂಬೆತ್ತಡ್ಕ, ಜೊತೆ ಕಾರ್ಯದರ್ಶಿಗಳಾದ ಆನಂದ ಎಸ್.ಟಿ.ಕೆಮ್ಮಾರ, ಉಮೇಶ್ ಗೌಡ ಸಂಕೇಶ, ಶಾಂತರಾಮ್ ಬೇಂಗದಪಡ್ಪು, ಹರೀಂದ್ರ ಊರಾಜೆ ವಳಕಡಮ, ಸಚಿನ್ ಪಲ್ಲಡ್ಕ ಪಟ್ಟೆ, ಸದಸ್ಯರಾದ ವಿನೋಧರ ಗೌಡ ಮಾಳ, ರಾಮಯ್ಯ ಗೌಡ ಬುಡಲೂರು, ಕೆ.ಎಸ್.ಬಾಲಕೃಷ್ಣ ಕೊಯಿಲ, ಸುಭಾಸ್ ಶೆಟ್ಟಿ ಆರುವಾರ, ಸುಧೀಶ್ ಪಟ್ಟೆ ಪಲ್ಲಡ್ಕ, ದಿನೇಶ್ ಗೌಡ ಊರಾಜೆ, ಸುಂದರ ಕೊರಿಕ್ಕಾರು, ಲಕ್ಷ್ಮೀನಾರಾಯಣ ರಾವ್ ಆತೂರು, ಅಶೋಕ ಗೋಕುಲನಗರ, ಬೈಲುವಾರು ಸಮಿತಿ ಗ್ರಾಮ ಸಂಚಾಲಕ ಭವಿತ್‌ರಾಜ್ ಪಲ್ಲಡ್ಕ, ಸಹಸಂಚಾಲಕ ಪ್ರವೀಣ್‌ರಾಜ್ ಕೊಲ್ಯ ಹಾಗೂ ಎಲ್ಲಾ ಉಪಸಮಿತಿಗಳ ಪದಾಧಿಕಾರಿಗಳು, ಗ್ರಾಮಸ್ಥರು, ಊರು-ಪರವೂರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here