ಪುತ್ತೂರು: ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದಲ್ಲಿ ಎ.6 ರಂದು ಸಂಜೆ ಶ್ರೀರಾಮ ನವಮಿ ಪ್ರಯುಕ್ತ ಭಜನಾ ಸೇವೆ ಹಾಗೂ ನೂತನ ಆಡಳಿತ ಸಮಿತಿ ಮತ್ತು ಭಜನಾ ಸಮಿತಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ಕೆದಂಬಾಡಿಬೀಡು ದಿ.ಬಾಲಕೃಷ್ಣ ಬಲ್ಲಾಳ್ ಸ್ಮರಣಾರ್ಥ ಕೆದಂಬಾಡಿಬೀಡು ಚಂದ್ರಹಾಸ ಬಲ್ಲಾಳ್ ಹಾಗೂ ಕುಟುಂಬಸ್ಥರಿಂದ ಭಜನಾ ಸೇವೆ ಹಾಗೂ ನವ್ಯತಾ ಮತ್ತು ಸಂತೋಷ್ ಕುಮಾರ್ ರೈ ಕೋರಂಗರವರಿಂದ ಅನ್ನದಾನ ಸೇವೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ರಾಮ ಮಂದಿರ ಆಡಳಿತ ಸಮಿತಿ ಹಾಗೂ ಭಜನಾ ಸಮಿತಿಯ ಪ್ರಕಟಣೆ ತಿಳಿಸಿದೆ.