ಸವಣೂರು: ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀ ದುರ್ಗಾ ಭಜನಾ ಮಂಡಳಿಯ ರಜತ ಸಂಭ್ರಮ-ಅರ್ಧ ಏಕಾಹ ಭಜನೆ ಎ.5ರಂದು ಭಜನಾ ಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ6ರಿಂದ ಭಗವದ್ಗೀತಾ ಪಾರಾಯಣ, ಬೆಳಿಗ್ಗೆ 6.45ರಿಂದ ಅರ್ಧ ಏಕಾಹ ಭಜನೆ ಪ್ರಾರಂಭ,ಗಣಹೋಮ ನಡೆಯಲಿದೆ. ಸಂಜೆ 4.30ರಿಂದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ, ಸಂಜೆ 7ಕ್ಕೆ ಭಜನಾ ಮಂಗಳೋತ್ಸವ,ರಾತ್ರಿ 8ಕ್ಕೆ ಮಹಾಪೂಜೆ,ಬಳಿಕ ಧಾರ್ಮಿಕ ಸಭೆ ನಡೆಯಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ಶ್ರೀ ಅನ್ನಪೂರ್ಣ ಪಾಕಶಾಲೆಯ ಉದ್ಘಾಟನೆ ಹಾಗೂ ನೂತನ ಸಭಾಭವನದ ಶಿಲಾನ್ಯಾಸ ನಡೆಯಲಿದೆ. ರಾತ್ರಿ 9.30ರಿಂದ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಬಳಿಕ ವರಾಹವತಾರ -ಅಗ್ರಪೂಜೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.