
ನೆಲ್ಯಾಡಿ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೌಡಳ್ಳಿ ಎನ್.ಕೆ.ಗಣಪ್ಪಯ್ಯ ರೋಟರಿ ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಶಿಕ್ಷಕರಿಗೆ ಮತ್ತು ಸಿಬ್ಬಂದಿಗಳನ್ನು ಶಾಲೆಯ ಪೋಷಕರಾದ ಬಜತ್ತೂರು ಗ್ರಾಮದ ಕಾಂಚನ ನೆಕ್ಕರೆಯ ಯಾದವ ಗೌಡ ಮತ್ತು ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು.
ಸಂಸ್ಥೆಯ ಪೋಷಕರ ಸಭೆಯಲ್ಲಿ ಸಂಸ್ಥೆಯ 17 ಮಂದಿ ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಯಾದವ ಗೌಡ ಹಾಗೂ ಅವರ ಕುಟುಂಬಸ್ಥರು ತಮ್ಮ ಕುಟುಂಬದ ಸೌಜನ್ಯ ನೆಕ್ಕರೆಯವರಿಗೆ ಯೋಗ್ಯ ಶಿಕ್ಷಣ ಮತ್ತು ಮಾರ್ಗದರ್ಶನ ನೀಡಿದ್ದಕ್ಕಾಗಿ ಕೃತಜ್ಞತಾ ಪೂರ್ವಕವಾಗಿ ಶಾಲು, ಹಾರ ಮತ್ತು ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು. ಶಾಲೆಯ ಪ್ರಾಂಶುಪಾಲರಾದ ಲೋಕೇಶ್, ಮುಖ್ಯೋಪಾಧ್ಯಾಯರಾದ ಈಶ್ವರಪ್ಪ ಹಕಾರಿ, ಶಿಕ್ಷಕರಾದ ಶೋಭಾ ಗುರ್ಲಕಟ್ಟಿ, ರೇಣುಕಾ ಎಚ್.ಟಿ., ಪ್ರಕಾಶ್ ಶಾಲದಾರ್ , ಭಾರತಿ ಎಚ್.ಟಿ., ಸಾವಿತ್ರಿ ಡಿ.ಕೆ., ಅನಿಲ್ ಕುಮಾರ್, ಷಣ್ಮುಖ ಬಿ.ಕೆ.ಯಲ್ಲಪ್ಪ ವಗ್ಗನವರ್, ಸಿಬ್ಬಂದಿಗಳಾದ ಕಾಂಚನ ಸಿ., ಮಂಜುನಾಥ್,ಶಾಂತಾ ಎಚ್.ಸಿ, ಶಶಿಕಲಾ, ಚೈತ್ರ, ಪವಿತ್ರ ಮತ್ತು ಮಲ್ಲಿಕಾರ್ಜುನರವರನ್ನು ಸನ್ಮಾನಿಸಿ ಗೌರವಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾ.ಪಂ.ಮಾಜಿ ಸದಸ್ಯ ಮುಕುಂದ ಬಜತ್ತೂರು ಮುಖ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿನಿ ಸೌಜನ್ಯ ನೆಕ್ಕರೆ ಅವರ ತಾಯಿ ಸುಜಾತ ನೆಕ್ಕರೆ, ಪೋಷಕರಾದ ವಿಮಲ ನೆಕ್ಕರೆ, ಯಾದವ ನೆಕ್ಕರೆ, ಸುದರ್ಶನ್ ನೆಕ್ಕರೆ, ರಮೇಶ್ ಕಾಯರ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಮೋಹನ್ ಚಂದ್ರ ತೋಟದ ಮನೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕುಶಾಲಪ್ಪ ಮುಖ್ಯ ಸಹಕರಿಸಿದರು.