ಪುತ್ತೂರು : ಮಕ್ಕಳ ಜ್ಞಾನ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ 4 ವರ್ಷದಿಂದ 9 ವರ್ಷದ ವರೆಗಿನ ಮಕ್ಕಳಿಗೆ ‘ವರ್ಣಿಕ’ ಬೇಸಿಗೆ ಶಿಬಿರವನ್ನು ಮಾರ್ಚ್ 31ರಿಂದ ಏಪ್ರಿಲ್ 4ರವರೆಗೆ 5ದಿನಗಳವರೆಗೆ ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಹಮ್ಮಿಕೊಳ್ಳಲಾಯಿತು.
ಶಿಬಿರವನ್ನು ಶಾಲೆಯ ಧಾರ್ಮಿಕ ಶಿಕ್ಷಣದ ಶಿಕ್ಷಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಉದ್ಘಾಟಿಸಿ, ಮಕ್ಕಳಿಗೆ ಕಥೆ, ಆಟಗಳನ್ನು ಆಡಿಸಿ ಮನರಂಜಿಸಿದರು.
ಈ ಶಿಬಿರದಲ್ಲಿ ಕುಣಿತ ಭಜನೆ, ಕಲೆ ಮತ್ತು ಕರಕುಶಲ, ಮೋಜಿನ ಆಟ, ಕೊಲಾಜ಼್ ತಯಾರಿಕೆ, ಚಿತ್ರಕಲೆ, ಯೋಗ, ಮುಖವಾಡ ತಯಾರಿಕೆ, ಕಸದಿಂದ ರಸ, ಮುಖವರ್ಣಿಕೆ, ಬಾಟಲ್ ಆರ್ಟ್, ಅಭಿನಯ ಗೀತೆ ಮುಂತಾದ ಕ್ರಿಯಾಶೀಲ ಚಟುವಟಿಕೆಗಳ ತರಬೇತಿಯ ಜೊತೆಗೆ, ಮಂಕುತಿಮ್ಮನ ಕಗ್ಗ ಮತ್ತು ಸಂತ ಕಬೀರನ ದೋಹೆ ಇವುಗಳ ಬಗೆಗೆ ಅರಿವು ನೀಡಲಾಯಿತು.
ಕೊನೆಯ ದಿನ ಶಿಬಿರದಲ್ಲಿ ಮಕ್ಕಳು ಕಲಿತ ವಿಷಯಗಳ ಪ್ರದರ್ಶನವನ್ನು ಮಾಡಿದರು .ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಮಕ್ಕಳೆಲ್ಲರಿಗೂ ಪ್ರಮಾಣ ಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಶಿಬಿರವನ್ನು ಶಾಲಾ ಶಿಕ್ಷಕರಾದ ರಮೇಶ್ ಹಾಗೂ ಶಿಕ್ಷಕಿಯರಾದ ಸುಮನಾ, ವಿದ್ಯಾಸರಸ್ವತಿ, ಸ್ವಾತಿ, ವೀಣಾ, ಲಕ್ಷೀ ಭಟ್, ನವನೀತಾ, ವಿನಯ ಪ್ರಭು, ಲಕ್ಷ್ಮಿತಾ ಇವರು ನಡೆಸಿಕೊಟ್ಟರು.