ಬೆಟ್ಟಂಪಾಡಿ: ಇಲ್ಲಿನ ವಿನಾಯನಕಗರ ಶ್ರೀ ಸಿದ್ಧಿವಿನಾಯಕ ಸೇವಾ ಸಂಘ, ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಾಣಗೊಂಡು ಪುನರ್ ಪ್ರತಿಷ್ಟೆಗೊಳ್ಳಲಿರುವ ಶ್ರೀ ಸಿದ್ಧಿವಿನಾಯಕ ದೇವರ ಛಾಯಾ ಬಿಂಬಕ್ಕೆ ಬೆಳ್ಳಿ ಸಮರ್ಪಣೆಯು ವೇ.ಮೂ. ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆಯವರ ನೇತೃತ್ವದಲ್ಲಿ ಏ. 10 ರಂದು ನಡೆಯಲಿದೆ.
ಬೆಂಗಳೂರಿನ ವಿ.ಆರ್. ಇನ್ನೋವೇಟಿವ್ ಸೊಲ್ಯುಷನ್‌ನ ನಿರ್ದೇಶಕ ಎಂ.ಡಿ. ವೆಂಕಟೇಶ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬೈಲಾಡಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಪಾಣಾಜೆ ವಿವೇಕ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸುನೀತಿ ನಾಗರಾಜನ್ ತಲೆಪ್ಪಾಡಿ ಬೆಳ್ಳಿ ಸಮರ್ಪಣೆ ಗೆ ಚಾಲನೆ ನೀಡಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಭಗವದ್ಭಕ್ತರಿಗೆ ಬೆಳ್ಳಿ ಸಮರ್ಪಣೆಗೆ ಅವಕಾಶ
ಶ್ರೀ ದೇವರ ಬೆಳ್ಳಿಯ ಛಾಯಾ ಬಿಂಬಕ್ಕೆ ಭಗವದ್ಭಕ್ತರು ತಮ್ಮ ಮನೆಯಲ್ಲಿರುವ ಯಾವುದೇ ಬೆಳ್ಳಿ ವಸ್ತುಗಳನ್ನು ಸಮರ್ಪಿಸಬಹುದಾಗಿದೆ. ಬೆಳ್ಳಿ ಇಲ್ಲದಿದ್ದಲ್ಲಿ ಮಂದಿರದ ಕೌಂಟರ್ ನಲ್ಲಿ ಮೌಲ್ಯ ಪಾವತಿಸಿ ಬೆಳ್ಳಿ ಸಮರ್ಪಿಸಲು ಅವಕಾಶವಿದೆ. ನೂತನ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ಛಾಯಾಬಿಂಬ ಪ್ರತಿಷ್ಠಾ ಮಹೋತ್ಸವವು ಮೇ 28 ರಿಂದ 30 ರವರೆಗೆ ನಡೆಯಲಿದೆ. ಭಕ್ತಾಭಿಮಾನಿಗಳು ಸರ್ವ ರೀತಿಯಲ್ಲಿ ಸಹಕರಿಸುವಂತೆ ಭಜನಾ ಮಂದಿರದ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ ರವರು ತಿಳಿಸಿದ್ದಾರೆ.