ಬೊಬ್ಬೆಕೇರಿ ಶಾಲಾ ವಿದ್ಯಾರ್ಥಿಗಳಿಂದ ರೈಲು ಪ್ರಯಾಣ – ಪ್ರಕೃತಿ ಸೊಬಗನ್ನು ವೀಕ್ಷಿಸಿದ ಪುಟಾಣಿಗಳು

0

ಕಾಣಿಯೂರು: ಶಾಲೆಯಲ್ಲಿ ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಅಕ್ಷರ ಕಲಿಯದೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು, ಪ್ರಕೃತಿಯೊಂದಿಗೆ ಆಟವಾಡಬೇಕು, ಪ್ರಕೃತಿಯ ಸೌಂದರ್ಯವನ್ನು ವೀಕ್ಷಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಕಡಬ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಬ್ಬೆಕೇರಿ ಇಲ್ಲಿನ ವಿದ್ಯಾರ್ಥಿಗಳಿಗೆ ವಿನೂತನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಶಾಲಾ ಪುಟಾಣಿಗಳು ರೈಲಿನಲ್ಲಿ ಪ್ರಯಾಣ ಬೆಳೆಸಿ ಪ್ರಕೃತಿಯ ಸೌಂದರ್ಯದ ಸೊಬಗನ್ನು ವೀಕ್ಷಣೆ ಮಾಡಿದರು. ಏ.9ರಂದು ಕಾಣಿಯೂರಿನಿಂದ ನೆಟ್ಟಣದವರೆಗೆ ರೈಲಿನಲ್ಲಿ ಪ್ರಯಾಣ ಮಾಡುವ ಮೂಲಕ ಪ್ರಕೃತಿಯಲ್ಲಿನ ಸೊಬಗನ್ನು ವೀಕ್ಷಿಸುತ್ತಾ ರೈಲಿನಲ್ಲಿ ಹಾಡುತ್ತ, ನಲಿಯುತ್ತಾ ಸಂತೋಷ ಪಟ್ಟರು. ಶಾಲಾ ಮುಖ್ಯಶಿಕ್ಷಕಿ ಶಶಿಕಲಾ, ಶಿಕ್ಷಕರಾದ ಜನಾರ್ದನ ಹೇಮಳ, ಶೋಭಿತಾ, ಗೀತಾಕುಮಾರಿ, ಸುರೇಖಾ, ಶೃತಿ, ಸುಶ್ಮಿತಾರವರು ಒಂದಷ್ಟು ಸಮಯಗಳನ್ನು ವಿದ್ಯಾರ್ಥಿಗಳೊಂದಿಗೆ ಕಳೆದರು.

LEAVE A REPLY

Please enter your comment!
Please enter your name here