ನೆಲ್ಯಾಡಿ: ಇಲ್ಲಿನ ಪಿಎಂಶ್ರೀ ಸರಕಾರಿ ಉನ್ನತ್ತೀಕರಿಸಿದ ಹಿ.ಪ್ರಾ.ಶಾಲೆಯ ಮುಂಭಾಗದಲ್ಲಿರುವ ಅವನಿ ಆರ್ಕೇಡ್‌ನ ಮೊದಲ ಮಹಡಿಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯವನ್ನೊಳಗೊಂಡ ರೂಟ್ ಕೆನಾಲ್ ಮತ್ತು ಇಂಪ್ಲಾಂಟ್ ಸೆಂಟರ್ ’ ಅಲಂಗಡೆ’ ದಂತ ಚಿಕಿತ್ಸಾಲಯ ಎ.9ರಂದು ಬೆಳಿಗ್ಗೆ ಶುಭಾರಂಭಗೊಂಡಿತು.
ಪುರೋಹಿತರಾದ ಮಿತ್ತೂರು ವೇದಮೂರ್ತಿ ಗೋಪಾಲಕೃಷ್ಣ ಭಟ್‌ರವರು ಪೂಜಾ ವಿಧಿವಿಧಾನ ನೆರವೇರಿಸಿದರು. ಉಪ್ಪಿನಂಗಡಿಯ ಖ್ಯಾತ ಮಕ್ಕಳ ತಜ್ಞರಾದ ಡಾ.ಎಂ.ಎನ್.ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ.ಎಂ.ಎನ್.ಭಟ್ ಅವರು, ಅಲಂಗಡೆ ದಂತ ಚಿಕಿತ್ಸಾಲಯದಲ್ಲಿ ನಿಖರವಾದ ತಾಂತ್ರಿಕ ಉಪಕರಣಗಳೊಂದಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದರಿಂದ ನೆಲ್ಯಾಡಿಯಂತಹ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಚಿಕಿತ್ಸೆಗೆ ಬರುವ ರೋಗಿಗಳಿಗೆ ಆರೋಗ್ಯಕರವಾದ ಹಾಗೂ ಕಡಿಮೆ ವೆಚ್ಚದಲ್ಲಿ ನಗುಮುಖದ ಸೇವೆ ನೀಡುವುದು ವೈದ್ಯರ ಕರ್ತವ್ಯವೂ ಆಗಿದೆ. ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಜನರಿಗೆ ಇಲ್ಲಿ ಸೇವೆ ಸಿಗಲಿ ಎಂದು ಹಾರೈಸಿದರು.

ಇಲ್ಲಿನ ದಂತ ವೈದ್ಯರಾದ ಡಾ.ಈಶಕೃಷ್ಣ ಭಟ್‌ರವರು ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ವೈದ್ಯಕೀಯ ಶಿಕ್ಷಣದ ನಂತರ ಹಳ್ಳಿಯಲ್ಲಿಯೇ ದಂತ ಚಿಕಿತ್ಸಾಲಯ ಆರಂಭಿಸಿ ಜನರ ಸೇವೆಗೆ ಮುಂದಾಗಿರುವುದು ಶ್ಲಾಘನೀಯ. ಅವರಿಗೆ ಈ ಸೇವೆಯಲ್ಲಿ ಯಶಸ್ಸು ಸಿಗಲಿ. ಅವರ ಕ್ಲಿನಿಕ್ ಹೆಚ್ಚು ಜನಪ್ರಿಯವಾಗಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಬೆಳ್ತಂಗಡಿಯ ದಂತ ವೈದ್ಯರಾದ ಡಾ.ರಾಘವೇಂದ್ರ ಪೆದಮಲೆ, ಪುತ್ತೂರು ಸರಕಾರಿ ಆಸ್ಪತ್ರೆಯ ದಂತ ವೈದ್ಯರಾದ ಡಾ.ಜೈದೀಪ್, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಅವನಿ ಕಟ್ಟಡದ ಮಾಲಕರೂ, ನೆಲ್ಯಾಡಿ ಸಿದ್ಧಿವಿನಾಯಕ ಹೋಮಿಯೋ ಕ್ಲಿನಿಕ್‌ನ ವೈದ್ಯರೂ ಆದ ಡಾ.ಪ್ರಸಾದ್‌ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ನೆಲ್ಯಾಡಿಯ ವೈದ್ಯರಾದ ಡಾ.ಕೃಷ್ಣಮೂರ್ತಿ, ಡಾ.ಅನೀಶ್, ಡಾ.ಸುದನ್ವ ಕುಡೂರು, ಡಾ.ಶಿವರಾಮ ಪನ್ಯ, ಕ್ಲಿನಿಕ್‌ನ ವೈದ್ಯರಾದ ಡಾ.ಈಶ ಕೃಷ್ಣ ಭಟ್ ಅವರ ಅಜ್ಜಿ ಸರಸ್ವತಿ, ತಂದೆ ವೆಂಕಟರಮಣ ಭಟ್ ಅಲಂಗಡೆ ಇಳಂತಿಲ, ತಾಯಿ ವೀಣಾಶಾರದಾ, ಉಮಾಮಹೇಶ್ವರ ಭಟ್, ಶ್ರೀಧರ ಭಟ್, ಮುಕ್ಕುಡ ಈಶ್ವರ ಜೋಯಿಸ, ಗಂಗಾಭಾರತಿ ಅಲಂಗಡೆ, ಉಷಾಪರಮೇಶ್ವರಿ ಅಲಂಗಡೆ, ಪಂಜಿಗುಡ್ಡೆ ಸೀತಾರಾಮ ಭಟ್, ಶ್ಯಾಮ್ ಪ್ರಸಾದ್ ಪಟ್ರಮೆ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು, ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ಉಳಿಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದಂತ ಚಿಕಿತ್ಸಾಲಯದ ವೈದ್ಯರಾದ ಡಾ.ಈಶ ಕೃಷ್ಣ ಭಟ್ ವಂದಿಸಿದರು.

ಚಿಕಿತ್ಸಾ ಸೌಲಭ್ಯ:
ಅಲಂಗಡೆ ದಂತ ಚಿಕಿತ್ಸಾಲಯದಲ್ಲಿ ಹಲ್ಲಿನ ತಪಾಸಣೆ ಮತ್ತು ಔಷಧಿ, ಒಂದೇ ಬಾರಿಗೆ ರೂಟ್ ಕೆನಾಲ್ ಚಿಕಿತ್ಸೆ, ವಕ್ರದಂತ ಚಿಕಿತ್ಸೆ (ಕ್ಲಿಪ್ ಟ್ರೀಟ್ಮೆಂಟ್), ಹಲ್ಲಿನ ಸ್ವಚ್ಛತೆ ಮತ್ತು ಪಾಲಿಶ್, ನೋವಿಲ್ಲದಂತೆ ಹಲ್ಲು ಕೀಳುವುದು, ಕೃತಕ ದಂತ ಜೋಡಣೆ, ಎಕ್ಸರೇ, ಹಲ್ಲಿನ ಬಣ್ಣದ ಫಿಲ್ಲಿಂಗ್, ಡೆಂಟಲ್ ಇಂಪ್ಲಾಂಟ್, ವಸಡು ಚಿಕಿತ್ಸೆ, ಸಂದು ಹಲ್ಲು ಫಿಲ್ಲಿಂಗ್, ಹಲ್ಲಿನ ಬಣ್ಣದ ಕ್ಯಾಪ್ ಚಿಕಿತ್ಸಾ ಸೌಲಭ್ಯಗಳಿವೆ. ಸೋಮವಾರದಿಂದ ಶನಿವಾರದ ತನಕ ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.30ರ ತನಕ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆ ತನಕ ಕ್ಲಿನಿಕ್ ತೆರೆದಿರುತ್ತದೆ. ಗ್ರಾಹಕರು ನೋಂದಾವಣೆ ಮಾಡಿದಲ್ಲಿ ಆದಿತ್ಯವಾರವೂ ಚಿಕಿತ್ಸೆ ಲಭ್ಯವಿದೆ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8197741311ಗೆ ಸಂಪರ್ಕಿಸಬಹುದು ಎಂದು ಕ್ಲಿನಿಕ್‌ನ ವೈದ್ಯರಾದ ಡಾ.ಈಶಕೃಷ್ಣ ಭಟ್ ಅಲಂಗಡೆ ಇಳಂತಿಲ ಅವರು ತಿಳಿಸಿದ್ದಾರೆ.