ಪುತ್ತೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಮ್ಚಿನಡ್ಕದ ಆಶಿಫಾ ಸಂಸ್ಕೃತದಲ್ಲಿ 100ಕ್ಕೆ 96 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಮೂಲತಃ ಪುತ್ತೂರು ತಾಲೂಕಿನ ಕಾವು ಅಮ್ಮಿನಡ್ಕದ ನಿವಾಸಿ ಬೆಂಗಳೂರಿನಲ್ಲಿ ಕೇಂದ್ರ ಸಂಪರ್ಕ ಇಲಾಖೆಯಲ್ಲಿ ಅಧಿಕಾರಿ ಖೈರುನ್ನೀಸಾ-ಜಾಕೀರ್ ದಂಪತಿ ಪುತ್ರಿಯಾಗಿರುವ ಆಶಿಫಾ ಹುಸೈನ್ ಬೆಂಗಳೂರಿನ ನಾರಾಯಣ ಟೆಕ್ನ ಸ್ಕೂಲ್‌ನಲ್ಲಿ ಪಿಯುಸಿ ವಿಜ್ಞಾನ 2 ವಿಭಾಗದಲ್ಲಿ ಅಭ್ಯಾಸ ಮಾಡಿದ್ದು ಸಂಸ್ಕೃತವನ್ನು ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡು ಒಟ್ಟು 563 ಅಂಕ ಗಳಿಸಿದ್ದಾಳೆ.