ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದೇನೆ: ಶಾಸಕ ಅಶೋಕ್ ರೈ
ಪುತ್ತೂರು: ಇಲ್ಲಿನ ರಕ್ತೇಶ್ವರಿ ಅಶ್ವಥಕಟ್ಟೆಯ ಬಳಿ ಕಾಂಕ್ರೀಟ್ ಮತ್ತು ಇಲ್ಲಿಂದ ಮುಂದೆ ತೆರಳುವ ರಸ್ತೆಯನ್ನು ಸುಮಾರು 7 ಲಕ್ಷ ರೂ ಅನುದಾನದಲ್ಲಿ ಅಭಿವೃದ್ದಿ ಮಾಡಿದ್ದೇನೆ, ಇದು ಇಲ್ಲಿನ ಭಕ್ತರ ಬಹುಕಾಲದ ಬೇಡಿಕೆಯೂ ಅಗಿತ್ತು ಅದನ್ನು ಈಡೇರಿಸಿದ್ದೇನೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ರಕ್ತೇಶ್ವರಿ ದೇವಸ್ಥಾನದ ವಠಾರದಲ್ಲಿರುವ ರಕ್ತೇಶ್ವರಿ ಅಶ್ವಥ್ಥಕಟ್ಟೆಯ ಬಳಿ ಹಾಕಲಾಗಿದ್ದ ನೂನ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಪುತ್ತೂರು ನಗರಸಭಾ ವ್ಯಾಪ್ತಿಯ ಬಹುತೇಕ ರಸ್ತೆಗಳು ಇನ್ನೂ ಅಭಿವೃದ್ದಿಯಾಗಿಲ್ಲ, ಬಡವರು ತೆರಳುವ ರಸ್ತೆಯನ್ನು ಇನ್ನೂ ಅಭಿವೃದ್ದಿ ಮಾಡಿಲ್ಲ ಮುಂದಿನ ದಿನಗಳಲ್ಲಿ ಎಲ್ಲಾ ರಸ್ತೆಗಳಿಗೂ ಅನುದಾನವನ್ನು ನೀಡುವುದಾಗಿ ಶಾಸಕರು ಹೇಳಿದರು. ಕಳೆದ ಚುನಾವಣೆಯ ಸಂದರ್ಭದಲ್ಲಿ ಈ ಭಾಗದ ಜನತೆ ಅನೇಕ ಬೇಡಿಕೆಗಳನ್ನು ಸಲ್ಲಿಸಿದ್ದರು ಅವುಗಳನ್ನು ಒಂದೊಂದಾಗಿ ಈಡೇರಿಸಲಾಗುವುದು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಅಭಿವೃದ್ದಿಯ ಹರಿಕಾರ ಎಂದು ಶಾಸಕರು ಚಿರಪರಿಚಿತರಾಗಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಅಭಿವೃದ್ದಿಯಾಗುತ್ತಲೇ ಇದೆ. ರಕ್ತೇಶ್ವರಿ ದೇವಸ್ಥಾನದ ಬಳಿಯ ಈ ಕಟ್ಟೆಗೆ ಇಷ್ಟು ವರ್ಷದಲ್ಲಿ ಇಂಟರ್‌ಲಾಕ್ ಹಾಕಿಲ್ಲ ಯಾಕೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವೋಟಿಗಾಗಿ ಮಾತ್ರ ಹಿಂದುತ್ವದ ಹೆಸರು ಹೇಳಿ ಜನರನ್ನು ಮಂಗ ಮಾಡುತ್ತಾರೆ ಚುನಾವಣೆಯ ಬಳಿಕ ಧರ್ಮ, ದೇವರು, ಹಿಂದುತ್ವ ಎಲ್ಲವನ್ನೂ ಮರೆತುಬಿಡುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ರಕ್ತೇಶ್ವರಿ ದೇವಸ್ಥಾನದ ಅರ್ಚಕರಾದ ಕೃಷ್ಣರಾವ್ ಶೇವಿರೆ, ಫುಡಾ ಸದಸ್ಯ ನಿಹಾಲ್ ಪಿ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಖಿಲ್ ಕಲ್ಲಾರೆ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಕೃಷ್ಣವೇಣಿ, ಆರ್ಯಾಪು ಸಿಎ ಬ್ಯಾಂಕ್ ಸದಸ್ಯ ರಂಜಿತ್ ಬಂಗೇರ, ನಗರಸಭಾ ಸದಸ್ಯ ದಿನೇಶ್ ಶೇವಿರೆ, ಬೂತ ಅಧ್ಯಕ್ಷ ಹರಿಪ್ರಸಾದ್, ಪ್ರವೀಣ್ ಶೆಟ್ಟಿ, ವಿನಾಯಕ, ರಕ್ತೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಶ್ಯಾಮಪ್ರಸಾದ್, ಸುಜಿತ್ ಶೆಟ್ಟಿ, ವಾರಿಜ ಶೇವಿರೆ., ಆನಂದ ನಾಯಕ್ ಶೇವಿರೆ, ಪುತ್ತೂರು ಆರೋಗ್ಯ ರಕ್ಷಾ ಸದಸ್ಯ ಚಂದ್ರಶೇಖರ ಕಲ್ಲೇಗ, ದೇವಸ್ಥಾನದ ವ್ಯವಸ್ಥಾಪಸಾ ಸಮಿತಿ ಸದಸ್ಯೆ ರೋಹಿಣಿ ಆಚಾರ್ಯ, ಈಶ್ವರ ನಾಯ್ಕ, ಅನಿಲ್ ಸುವರ್ಣ, ಬೂತ ಪದಾಧಿಕಾರಿಗಳಾದ ಕುಮಾರ್ ದೇವಾಡಿಗ, ನವೀನ್ ಶೇವಿರೆ, ಶೋಭಾ ಗೋಪಾಲ್, ಕುಸುಮ ಹರೀಶ್, ಜಿನ್ನಪ್ಪ ನಾಯ್ಕ, ಕೃಷ್ಣ ನಾಯ್ಕ, ಬೇಬಿ ಶೇವಿರೆ, ಜಾನಕಿ ಶೇವಿರೆ ಉಪಸ್ಥಿತರಿದ್ದರು. ಕಲಾವಿದ ಕೃಷ್ಣಪ್ಪ ಸ್ವಾಗತಿಸಿದರು. ನಗರಸಭಾ ಸದಸ್ಯ ದಿನೇಶ್ ಶೇವಿರೆ ಕಾರ್ಯಕ್ರಮ ನಿರೂಪಿಸಿದರು.