ಪುತ್ತೂರು:ಐತಿಹಾಸಿಕ ಕಾರಣಿಕ ಕ್ಷೇತ್ರ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ.26ರಂದು ನಡೆಯಲಿರುವ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯು ಎ.8ರಂದು ಬಿಡುಗಡೆಗೊಂಡಿತು.

ಆಮಂತ್ರಣವನ್ನು ಮನೆ ಮನೆ ವಿತರಿಸಲು ಬೈಲುವಾರು ಸಮಿತಿಗಳಿಗೆ ಹಸ್ತಾಂತರಿಸಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ದೇವಸ್ಯ, ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು, ಸೀತಾರಾಮ ರೈ ಕೈಕಾರ, ಬಾಲಕೃಷ್ಣ ಗೌಡ ಕಾಣಿಕೆ, ದೇವಸ್ಥಾನದ ಆಡಳಿತಾಧಿಕಾರಿ ಗೋಪಾಲ ಟಿ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.