ಶ್ರೀ ಶಂಕರ ವೇದಪಾಠ ಶಾಲೆ ಮಾಡಾವು – ವಸಂತ ವೇದ ಶಿಬಿರ ಉದ್ಘಾಟನೆ

0

ಕೆಯ್ಯೂರು: ಶ್ರೀ ಶಂಕರ ವೇದಪಾಠಶಾಲೆ ಮಾಡಾವು ಇದರ ವಸಂತ ವೇದ ಶಿಬಿರವು ಇಂದು ಜ್ಯೋತಿಷಿ ವೆಂಕಟರಮಣ ಭಟ್ ಅವರ ವಠಾರದಲ್ಲಿ ವೇದಮೂರ್ತಿ ಶ್ರೀ ಶಂಭು ಭಟ್ ಚಾವಡಿಬಾಗಿಲು ಇವರಿಂದ ದೀಪ ಪ್ರಜ್ವಲಿಸುವ ಮೂಲಕ ಎ.10ರಂದು ಉದ್ಘಾಟನೆಗೊಂಡಿತು. ಜ್ಯೋತಿಷಿ ವೆಂಕಟರಮಣ ಭಟ್, ವೇ|ಮೂ| ಶ್ರೀರಾಮ ಭಟ್, ಕುರಿಯತ್ತಡ್ಕ, ಮಧುಶ್ರೀ ಮಾಡಾವು, ಮತ್ತು ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು. 

ವೇ|ಮೂ| ಗಣೇಶ ಭಟ್ ಮಾಡಾವು ಇವರ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಪಾಠಶಾಲೆಯು ಈ ಬಾರಿ ಮೂರನೇ ವರ್ಷದ ಶಿಬಿರವನ್ನು ಆಯೋಜಿಸಿದೆ. ಶಾಲಾ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾಲ ವಸಂತ ಋತುವಿನಲ್ಲಿ ಯಜುರ್ವೇದ ಮಂತ್ರಗಳು, ಸೂಕ್ತ, ರುದ್ರ, ಚಮಕ, ಪಂಚಾಯತನ ದೇವರ ಪೂಜೆ, ಶ್ಲೋಕ, ಸುಭಾಷಿತಗಳಲ್ಲದೇ ಸನಾತನ ಸಂಸ್ಕಾರಗಳ ಬಗೆಗೆ ಕಲಿಸಲಾಗುತ್ತಿದೆ. ಊರ, ಪರವೂರ ಹತ್ತಾರು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here