ಎ..12,13: ವಿವಿಧ ಮಾಹಿತಿ, ತರಬೇತಿ ಕಾರ್ಯಕ್ರಮ
ಪುತ್ತೂರು: ಸುದ್ದಿ ಮಾಹಿತಿ ಟ್ರಸ್ಟ್, ಏವಿಜಿ ಎಜುಕೇಶನಲ್ ಮತ್ತು ಚಾರೀಟೇಬಲ್ ಟ್ರಸ್ಟ್, ಸುದಾನ ರೆಸಿಡೆನ್ಸಿಯಲ್ ಸ್ಕೂಲ್ ಪುತ್ತೂರು ಸಹಯೋಗದಲ್ಲಿ ನಡೆಯಲಿರುವ ಶೈಕ್ಷಣಿಕ ಮೇಳ 2025ರಲ್ಲಿ ಪುತ್ತೂರು ನೆಹರನಗರ ಸುದಾನ ರೆಸಿಡೆನ್ಸಿಯಲ್ ಸ್ಕೂಲ್ ನ ಎಡ್ವರ್ಡ್ ಕನ್ವೆಕ್ಷನ್ ಹಾಲ್ ನಲ್ಲಿ ವಿವಿಧ ಮಾಹಿತಿ, ತರಬೇತಿ ಕಾರ್ಯಕ್ರಮ ಎ.12, 13ರಂದು ನಡೆಯಲಿದೆ.
ತರಬೇತಿ ಕಾರ್ಯಗಾರದ ವಿವರ
ಎ.12ರಂದು ಬೆ. 10:00ರಿಂದ 12 ಮೊಜಂಟಿ ಜೇನು ತರಬೇತಿ, 10:00ರಿಂದ 12 ಮಳೆ ನೀರು ಕೊಯ್ಲು ಘಟಕ ಕುರಿತು ಮಾಹಿತಿ ,11:30 ರಿಂದ 1:30 ಸಿಇಟಿ, ಎನ್ ಇಇಟಿ ಪರೀಕ್ಷೆಗಳನ್ನು ಎದುರಿಸುವುದು ಹೇಗೆ?, 2:00 ರಿಂದ 3:30 ಪಿಯುಸಿ ನಂತರ ಮುಂದೇನು?, 2:00 ರಿಂದ 5:00 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ಯಮಿಗಳಿಗೆ ZED ಪ್ರಮಾಣ ಪತ್ರದ ಬಗ್ಗೆ ಅರಿವು ಮತ್ತು ಪ್ರಯೋಜನಗಳ ಕುರಿತು ಮಾಹಿತಿ,3:30 80 6:00 Institute Orientation ಮಾಹಿತಿ ಕಾರ್ಯಾಗಾರ ನಡೆಯಲಿದೆ.
ಎ.13ರಂದು 10:00ರಿಂದ 12 ಅಣಬೆ ಕೃಷಿ ತರಬೇತಿ, 10:30 ರಿಂದ 12:00 ಪಿಯುಸಿ ನಂತರ ಮುಂದೇನು? ವಿಶೇಷವಾಗಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ, 12:00 ರಿಂದ 1:30 ವೃತ್ತಿಪರ ಶಿಕ್ಷಣ ಮತ್ತು ಅವಕಾಶಗಳು, 2:00 80 5:00 Institute Orientation, 2:30 ರಿಂದ 5 ಜೇನು ತರಬೇತಿ, 3.00 ರಿಂದ 5 ಉದ್ಯಮಶೀಲತೆ, ಅಭಿವೃದ್ಧಿ ಕುರಿತು ವಿಶೇಷ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಇದರ ಜೊತೆಗೆ ಜೀವನಕ್ಕೆ ಬೇಕಾದ ಮಳೆ ಕೊಯ್ಲು, ಉದ್ಯಮ ಶೀಲತೆ, ಉದ್ಯಮಗಳಿಗೆ ಬೇಕಾದ ಝಡ್ ಸರ್ಟಿಫಿಕೇಟ್, ಬ್ಯಾಂಕ್ ಸೌಲಭ್ಯಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಇತರ ವಿವಿಧ ತರಬೇತಿಗಳಾದ ಡ್ಯಾನ್ಸ್ ನೃತ್ಯ, ಭರತನಾಟ್ಯ, ಸ್ಕೆಟಿಂಗ್, ಈಜು, ಯೋಗ, ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್, ನೆಟನೆ, ಯಕ್ಷಗಾನ, ಸಾಹಿತ್ಯ, ಕಲೆ, ಕರಾಟೆ, ಸಂಗೀತ, ಸಂಗೀತ ವಾದ್ಯ, ನಾಟಕ, ಚೆಂಡೆ, ಕ್ರಿಕೆಟ್, ಚೆಸ್ ಸೇರಿದಂತೆ ಇನ್ನಿತರ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ತರಬೇತಿ ಮಾಹಿತಿ ಪಡೆಯಬಹುದು.