ಪುತ್ತೂರು: ಪುತ್ತೂರಿನ ನೆಹರು ನಗರದ ನಿವಾಸಿ ಮೋಹನ್ ದಾಸ್ ಪಿಲಿಂಜ ಮತ್ತು ಗಾಯತ್ರಿ ಪಿಲಿಂಜ ಇವರ ಪುತ್ರಿ ಡಾ.ಗಾನ ಪಿಲಿಂಜ ಇವರು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಫಿ ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ಸ್ ಆಫ್ ಫಿಸಿಯೋಥೆರಪಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ಮಾಸ್ಟರ್ ಆಫ್ ಫಿಸಿಯೋಥೆರಪಿ ಮಸ್ಕುಲೋಸ್ಕೆಲೆಟಲ್ ಮತ್ತು ಸ್ಪೋರ್ಟ್ಸ್ ಇಯರಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುತ್ತಿದ್ದಾರೆ.
ಸಂಗೀತದಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆ ಪೂರ್ಣಗೊಳಿಸಿದ್ದು ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಯನ್ನು ಪೂರ್ಣಗೊಳಿಸಿರುತ್ತಾರೆ. ವಿದ್ಯಾರ್ಥಿದೆಸೆಯಲ್ಲಿಯೇ ಸಮಾಜಸೇವೆ ಮಾಡುತ್ತಿದ್ದಾರೆ. ಇವರಿಗೆ ಶ್ರೀ ಕೃಷ್ಣ ಯುವಕಮಂಡಲ(ರಿ.) ಸಿಟಿಗುಡ್ಡೆ ಪುತ್ತೂರು, ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು, ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ವತಿಯಿಂದ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಸರ್ಕಾರಿ ಪ್ರೌಢಶಾಲೆ ಕಬಕದ ಸಾಹಿತಿ ಶಿಕ್ಷಕಿ ಶಾಂತಾ ಪುತ್ತೂರು, ಕವಯಿತ್ರಿ ನವ್ಯಪ್ರಸಾದ್ ನೆಲ್ಯಾಡಿ, ದೇವಿಪ್ರಸಾದ್ ನೆಲ್ಯಾಡಿ ಶುಭಕೋರಿದರು. ನವ್ಯಪ್ರಸಾದ್ ನೆಲ್ಯಾಡಿ ಸನ್ಮಾನ ಪತ್ರ ಓದಿದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ನ ಸಮಾಜ ಸೇವಕ ನವೀನ್ ಸಿಟಿಗುಡ್ಡೆ ಧನ್ಯವಾದಗೈದರು. ನವ್ಯ ದೇವಿಪ್ರಸಾದ್ ರವರ ಮಗ ಪುಟಾಣಿ ಪ್ರದ್ವಿನ್ ಹುಟ್ಟುಹಬ್ಬ ಆಚರಿಸಲಾಯಿತು.