ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಯುರೇಕಾ -2025 : ಶಿಬಿರಾರ್ಥಿಗಳಿಂದ ರಾಮಕೃಷ್ಣ ಮಿಷನ್‌ ಸಂಸ್ಥೆಗೆ ಭೇಟಿ

0


ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಯುರೇಕಾ -2025 ನಾಲ್ಕನೇ ದಿನದ ಶಿಬಿರದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಕ್ಷೇತ್ರ ಭೇಟಿಯನ್ನು ಏರ್ಪಡಿಸಲಾಯಿತು. ಮಂಗಳೂರಿನ ರಾಮಕೃಷ್ಣ ಮಿಷನ್ ಗೆ ವಿದ್ಯಾರ್ಥಿಗಳು ಭೇಟಿ ನೀಡಿದರು.


ವಿದ್ಯಾರ್ಥಿಗಳಿಗೆ ರಾಮಕೃಷ್ಣ ಮಿಷನ್ ನ ಅಧ್ಯಕ್ಷರು ಸ್ವಾಮಿ ಜಿತಕಾಮಾನಂದ ಅವರು ಆಶ್ರಮದ ಮತ್ತು ಸುತ್ತಮುತ್ತಲಿನ ಪರಿಸರದ ಪರಿಚಯವನ್ನು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಮಿಯಾವಾಕಿ
ನಗರಾರಣ್ಯವನ್ನು ಸಂದರ್ಶಿಸಲಾಯಿತು. ಬಳಿಕ ರಾಮಕೃಷ್ಣ ಆಶ್ರಮದ ಪರಿಸರದಲ್ಲಿ ವಿದ್ಯಾರ್ಥಿಗಳಿಗಾಗಿ ಖ್ಯಾತ ಕಲಾವಿದರು ಹಾಗೂ ಪರಿಸರ ಶಾಸ್ತ್ರಜ್ಞ ದಿನೇಶ್ ಹೊಳ್ಳ ಅವರು ಪರಿಸರ ಸಂರಕ್ಷಣೆ ಹಾಗೂ ಪರಿಸರ ಪ್ರೇಮದ ಕುರಿತು ಜಾಗೃತಿ ಮೂಡಿಸುವ ಬಗ್ಗೆ ಒಂದು ಅವಧಿಯನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟವನ್ನು ಹೇಗೆ ಸಂರಕ್ಷಿಸಬಹುದು? ಇಂದಿನ ಯುವಜನತೆಯಲ್ಲಿ ಪರಿಸರ ಪ್ರೇಮ ಹಾಗೂ ಕಲೆಯ ಕುರಿತು ಜಾಗೃತಿ ಹೇಗೆ ಮೂಡಿಸಬಹುದು? ನಮ್ಮ ಮೂಲ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳದೆ ಹೋದರೆ ನಾವು ಎದುರಿಸಬೇಕಾಗಬಲ್ಲ ಅನಾಹುತಗಳ ಬಗ್ಗೆ ವಿದ್ಯಾರ್ಥಿಗಳನ್ನು ಎಚ್ಚರಿಸಿದರು. ಅಪರಾಹ್ನದ ಬಳಿಕ ವಿದ್ಯಾರ್ಥಿಗಳಿಗೆ ಬಣ್ಣದ ಕಾಗದಗಳನ್ನು ಬಳಸಿಕೊಂಡು ವಿವಿಧ ಆಕೃತಿ ಹಾಗೂ ವಿನ್ಯಾಸಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

LEAVE A REPLY

Please enter your comment!
Please enter your name here