ಬಡಗನ್ನೂರು: ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆ, ಪ್ರತಿಭಾ ಪ್ರೌಢ ಶಾಲೆ ಪಟ್ಟೆ, ಹಾಗೂ ಮಾತೃ ಸಂಸ್ಥೆ ದ್ವಾರಕಾ ಪ್ರತಿಷ್ಠಾನ ಪುತ್ತೂರು ಇದರ ಆಶ್ರಯದಲ್ಲಿ 5 ರಿಂದ 10 ನೇ ತರಗತಿ ಮಕ್ಕಳಿಗೆ ” ಆಕಾಶಕ್ಕೆ ಏಣಿ’ ” ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಏ.10 ರಂದು ಪಟ್ಟೆ ಶ್ರೀ ಕೖಷ್ಣ ಹಿ. ಪ್ರಾ. ಶಾಲಾ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಕ್ರಾಫ್ಟ್, ವೇದಗಣಿತ, ಮನರಂಜನಾ ಆಟಗಳ ಸಂಪನ್ಮೂಲ ವ್ಯಕ್ತಿ ಸತ್ಯ ಮೂರ್ತಿ ಹೆಬ್ಬಾರ್ ಮಾತನಾಡಿ,ಗಣಿತ ಜೀವನ ಪರಿಯಂತ ಪಾಠವಾಗಿದೆ. ವೇದಗಣಿತದಿಂದ ಲೆಕ್ಕ, ಮಗ್ಗಿ ಇತ್ಯಾದಿ ಸುಲಭವಾಗಿ ಅಭ್ಯಾಸ ಮಾಡಲು ಸಾದ್ಯವಿದೆ. ಪುಸ್ತಕ ನಮ್ಮ ಜ್ಞಾನ ಭಂಡಾರವನ್ನು ವೃದ್ಧಿ ಗೊಳಿಸುತ್ತದೆ ಉತ್ತಮ ಸಾಹಿತ್ಯ ಪುಸ್ತಕಗಳನ್ನು ಓದುವ ಹವ್ಯಾಸ ಇಟ್ಟುಕೊಳ್ಳಿ ಶಿಬಿರಗಳು ಮಕ್ಕಳಿಗೆ ಸಂಸ್ಕಾರಯುತ ಜೀವನ ಶಿಕ್ಷಣಕ್ಕೆ ಪೂರಕ ಚಟುವಟಿಕೆ ರೂಪಿಸುತ್ತದೆ ಎಂದರು.
ಪಟ್ಟೆ ಶ್ರೀ ಕೖಷ್ಣ ಹಿ. ಪ್ರಾ. ಶಾಲಾ ಪೋಷಕ ಸಮಿತಿ ಅದ್ಯಕ್ಷ ಕೇಶವ ಪ್ರಸಾದ್ ನೀಲಗಿರಿ ಮಾತನಾಡಿ, ಪಟ್ಟೆ ವಿದ್ಯಾ ಸಂಸ್ಥೆಯಲ್ಲಿ ವಿಶೇಷವಾಗಿ ಪ್ರಥಮ ಬಾರಿಗೆ ಬೇಸಿಗೆ ಶಿಬಿರ ಆಯೋಜಿಸದ ಬಗ್ಗೆ ಮಾತೃಸಂಸ್ಥೆ ದ್ವಾರಕ ಪ್ರತಿಷ್ಠಾನಕ್ಕೆ ಅಭಿನಂದನೆ ಸಲ್ಲಿಸಿದ ಅವರು ಶಿಬಿರದಲ್ಲಿ ಕಲಿತ ವಿಚಾರದಾರೆಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಹೇಳಿ ಶುಭ ಹಾರೖೆಸಿದರು.
ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷ ಅಮೃತ ಕೃಷ್ಣ, ಸಮಾರೋಪ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡಾಗ ಜೀವನದಲ್ಲಿ ಉತ್ತಮ ಗುರಿ ತಲುಪಲು ಸಾಧ್ಯ ಈ ದೃಷ್ಟಿಯಿಂದ ಆಕಾಶಕ್ಕೆ ಏಣಿ ಎಂಬ ಶಿರ್ಷಿಕೆಯ ನಾಮದೇಯ ಇಟ್ಟುಕೊಂಡು ಗುರಿ ಸಾಧನೆಗೆ ಹಲವು ಅವಕಾಶಗಳು ಕಲ್ಪಿಸುವುದಾಗಿದೆ. ಮತ್ತು ಸಮಾಜದಲ್ಲಿ ಹೇಗಿರಬೇಕು ಅನ್ನುವ ಈ ಶಿಬಿರದ ಉದ್ದೇಶವಾಗಿದೆ ಎಂದ ಅವರು ” ಸುಸಂಸ್ಕೃತ ಸಮಾಜ ನಮ್ಮ ಸಂಸ್ಕೃತಿ ” ಧ್ಯೇಯ ವಾಕ್ಯವನ್ನು ಇಟ್ಟು ಕೊಂಡು ಮುನ್ನಡೆಸುವ ಮಾತೃ ಸಂಸ್ಥೆ ದ್ವಾರಕ ಪ್ರತಿಷ್ಠನಾ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಬೇಕಾದ ಕಾರ್ಯವನ್ನು ಮಾಡುದಾಗಿ ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೖೆಸಿದರು.

ವೇದಿಕೆಯಲ್ಲಿ ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ ಬಿ ಹಾಗೂ ಶ್ರೀಕೃಷ್ಣ ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್ ಉಪಸ್ಥಿತರಿದ್ದರು.ಶಿಬಿರಾರ್ಥಿಗಳು ಶಿಬಿರದ ಬಗ್ಗೆ ತಮ್ಮ ತಮ್ಮ ಅನಿಸಿಕೆಯನ್ನು ಸಭೆಯಲ್ಲಿ ವ್ಯಕ್ತಪಡಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುದಾಗಿ ಹೇಳಿಕೊಂಡರು.
ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷ ಅಮೃತ ಕೃಷ್ಣ ಹಾಗೂ ಅತಿಥಿಗಳು ಒಟ್ಟು ಸೇರಿ ಪ್ರಮಾಣ ಪತ್ರ ವಿತರಣೆ ಮಾಡಿದರು.ವಿದ್ಯಾ ಸಂಸ್ಥೆಯ ಸಂಚಾಲಕ ವಿಘ್ನೇಶ್ ಹಿರಣ್ಯ ಮಾತನಾಡಿ, ವಂದಿಸಿದರು. ಶ್ರೀ ಕೖಷ್ಣ ಹಿ. ಪ್ರಾ ಶಾಲಾ ಸಹ ಶಿಕ್ಷಕ ರಾಮಚಂದ್ರಪ್ಪ ಸ್ವಾಗತಿಸಿದರು. ಪ್ರತಿಭಾ ಪ್ರೌಢಶಾಲಾ ಸಹ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಗುಮಾಸ್ತ ಬಾಲಕೃಷ್ಣ ಹೆಗಡೆ ಹಾಗೂ ಉಭಯ ಸಂಸ್ಥೆಗಳ ಅಧ್ಯಾಪಕ ವೃಂದ ಮತ್ತು ಅಕ್ಷರದಾಸೋಹ ಸಿಬ್ಬಂದಿಗಳು ಸಹಕರಿಸಿದರು.
ಚಟುವಟಿಕೆ:-
ಮೂರು ದಿವಸದ ಶಿಬಿರದಲ್ಲಿ ವಿವಿಧ ಶಾಲೆಯ ಸುಮಾರು 115 ವಿದ್ಯಾರ್ಥಿಗಳು ಭಾಗವಹಿಸಿ ಯೋಗ , ಧ್ಯಾನ, ಏರೋಬಿಕ್ಸ್, ಚಿತ್ರಕಲೆ, ಕ್ರಾಫ್ಟ್, ವೇದಗಣಿತ, ಮನರಂಜನಾ ಆಟಗಳು, ಸಂಗೀತ ಹಾಗೂ ನೃತ್ಯ ಇತ್ಯಾದಿ ವಿಷಯಗಳಿಗೆ ಪ್ರತ್ಯೇಕ ನುರಿತ ತಜ್ಞರಿಂದ ತರಬೇತಿ ನೀಡಿ ವ್ಯಕ್ತಿತ್ವ ವಿಕಾಸ ಪಡಿಸುವ ಚಟುವಟಿಕೆಗಳ ಸದುಪಯೋಗ ಪಡೆದುಕೊಂಡರು.