ಕೆಯ್ಯೂರು:ಕೆಯ್ಯೂರು ನಿವಾಸಿ, ಕೆಯ್ಯೂರು ಸ.ಹಿ.ಪ್ರಾ.ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದು, ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ, ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮುಗಿಸಿ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವನ್ನು ಪಡೆದು ಇದೀಗ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದ ಪ್ರಸ್ತುತ ಬೆಂಗಳೂರು ಯಲಹಂಕ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿರುವ ಕೆಯ್ಯೂರಿನ ಪ್ರದೀಪ್ ಪೂಜಾರಿಯವರಿಗೆ ಅವರ ನಿವಾಸದಲ್ಲಿ ಎ.10ರಂದು ಕೆಯ್ಯೂರು ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಫಲಪುಷ್ಪ ,ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆಯ್ಯೂರು ವಲಯ ಕಾಂಗ್ರೆಸ್ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು, ಕಾರ್ಯದರ್ಶಿ ಹನೀಪ್ ಕೆ ಎಂ, ಕೆಯ್ಯೂರು ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೂಪಾ ಎಸ್ ರೈ , ಕಾರ್ಯದರ್ಶಿ ಧರಣಿ ಸಿ.ಬಿ, ನಿಕಟ ಪೂರ್ವ ಅಧ್ಯಕ್ಷರಾದ ಎ.ಕೆ ಜಯರಾಮ ರೈ ಕೆಯ್ಯೂರು, ಸಂತೋಷ್ ಕುಮಾರ್ ರೈ ಇಳಂತಾಜೆ, ಉಮಾಕಾಂತ ಬೈಲಾಡಿ, ಶೀನಪ್ಪ ರೈ ದೇವಿ ನಗರ, ಅಬ್ದುಲ್ ಖಾದರ್ ಮೇರ್ಲ, ದಾಮೋದರ ಪೂಜಾರಿ ಕೆಂಗುಡೇಲು, ಶೇಷಪ್ಪ ದೇರ್ಲ, ಬಟ್ಯಪ್ಪ ರೈ ದೇರ್ಲ, ಉದಯ ಕೆಂಗುಡೇಲು, ಅಬೂಬಕ್ಕರ್ ಎಂಎಂ, ವಿಶ್ವನಾಥ್ ಪೂಜಾರಿ ಕೆಂಗುಡೇಲು, ಬಾಲಕೃಷ್ಣ ಪೂಜಾರಿ ಪಲ್ಲತ್ತಡ್ಕ, ಭವಾನಿ ಬಾಲಕೃಷ್ಣ ಪೂಜಾರಿ ಪಲ್ಲತ್ತಡ್ಕ, ಹನ್ನತ್ ಕೆಯ್ಯೂರು, ಶೇಷಪ್ಪ ದೇರ್ಲ, ಜಗದೀಶ ಎಂಪಿ, ಗುರುರಾಜ್ ಕೆಯ್ಯೂರು, ಶತ್ತರ್ ಅರಿಕ್ಕಿಲ, ಹರಿನಾಥ ನಾಯ್ಕ , ನಾರಾಯಣ ಪೂಜಾರಿ, ಉಪಸ್ಥಿತರಿದ್ದರು.

ಪ್ರದೀಪ್ ಪೂಜಾರಿ ಆರ್ ಟಿ ಡಿ ಸರ್ವೆ ಸೂಪರ್ ವೈಸರ್ ಬಾಲಕೃಷ್ಣ ಪೂಜಾರಿ ಕೆಂಗುಡೇಲು, ಗುಣವತಿ ಬಾಲಕೃಷ್ಣ ಪೂಜಾರಿ ಕೆಂಗುಡೇಲು ದಂಪತಿಗಳ ಪುತ್ರ.