ಪುತ್ತೂರು; ಸರಕಾರಿ ಪ್ರೌಢಶಾಲೆ ಮಣಿಕ್ಕರ ಇಲ್ಲಿ 2024-25 ನೇ ಸಾಲಿನ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ವಿವಿಧ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಮುಖ್ಯ ಶಿಕ್ಷಕಿ ನಳಿನಿ.ಕೆ ಇವರ ನೇತೃತ್ವದಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.

ಅಲ್ಲದೆ ವಿಶೇಷವಾಗಿ ಹಾಜರಾತಿಗೆ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ಈಗಾಗಲೇ ವರ್ಷದ ಆರಂಭದಲ್ಲಿ ಘೋಷಣೆ ಮಾಡಲಾದ 5000 ನಗದು ಬಹುಮಾನವನ್ನು ನೀಡುವ ಕಾರ್ಯಕ್ರಮ ನಡೆಯಿತು. ಎಸ್.ಡಿ.ಎಂ.ಸಿ. ಸದಸ್ಯ ಇಬ್ರಾಹಿಂ ಎ ಇವರು ಘೋಷಣೆ ಮಾಡಿದ್ದ ಆ ಹಣವನ್ನು ಅವರು ಶೇಕಡಾ ಹಾಜರಾತಿ ಪಡೆದ ವಿದ್ಯಾರ್ಥಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಕಲಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚಲ್ಲ ಶ್ರೀಧರ ಭಟ್ ಇವರು ನೀಡಿರುವ ದತ್ತಿನಿದಿ ಮತ್ತು ನಿವೃತ್ತ ಮುಖ್ಯಶಿಕ್ಷಕ ಮಹಲಿಂಗೇಶ್ವರ ಇವರ ದತ್ತಿ ನಿಧಿ ಹಾಗೂ ಮಕ್ಕಳ ಕಲ್ಯಾಣ ನಿಧಿಯ ನಗದು ಮೊತ್ತ ನೀಡುವುದರ ಮೂಲಕ ಕಲಿಕೆಯಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಲಾಯಿತು.
ಶಾಲಾ ಚಟುವಟಿಕೆಗಳಾದ ಹಾಡು ಕಥೆ ರಸಪ್ರಶ್ನೆ ಚಿತ್ರಕಲೆ ಗುಂಪಾಟಗಳು ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳನ್ನು ಹಾಗೂ ರಾಜ್ಯಮಟ್ಟದ ಕ್ರೀಡಾ ಪ್ರತಿಭೆಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಪ್ರೋತ್ಸಾಹಿಸಲಾಯಿತು ವಾರ್ಷಿಕ ಸಂಚಿಕೆ “ಸ್ಪಂದನ” ಹಸ್ತಪ್ರತಿಯನ್ನು ಚಲ್ಲ ಶೀದರ್ ಭಟ್ ಅವರು ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.ಶಾಲೆಯ ಎಲ್ಲಾ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಶಾಲಾ ಕಾರ್ಯ ಅಧ್ಯಕ್ಷ ಸೈಯದ್ ಗಫೂರ್ ಸಾಹೇಬ್‌ರವರು ಸಂದಭೋಚಿತವಾಗಿ ಮಾತನಾಡಿದರು. ಎಲ್ಲಾ ಅಧ್ಯಾಪಕರುಗಳು ಸಹಕರಿಸಿರು.