ಪುತ್ತೂರು: ಪುತ್ತೂರು ಪುರಸಭೆಗೆ ಸಂಬಂಧಪಟ್ಟ ಬೋರ್ ವೇಲ್ ನಲ್ಲಿ ಸುಮಾರು ದಿನಗಳಿಂದ ನೀರು ಪೋಲಾಗುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿರುವುದಾಗಿ ತಿಳಿದು ಬಂದಿದೆ.
ನೆಲ್ಲಿಕಟ್ಟೆ ಸಮೀಪ, ಖಾಸಗಿ ಶಾಲೆಯೊಂದಕ್ಕೆ ತೆರಳುವ ದಾರಿಯಲ್ಲಿರುವ ಪುತ್ತೂರು ಪುರಸಭೆಗೆ ಸಂಬಂಧಪಟ್ಟ ಬೋರ್ ವೇಲ್ ನಲ್ಲಿ ಸುಮಾರು ಹದಿನೈದು ದಿನಗಳಿಂದ ನೀರು ಪೋಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹರಿದಾಡುತ್ತಿದೆ.
ಈ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದ್ದು, ಪುರಸಭೆ ಅಧಿಕಾರಿಗಳು ಕ್ರಮಕೈಗೊಂಡು ನೀರು ಪೋಲಾಗುತ್ತಿರುವುದನ್ನು ತಪ್ಪಿಸಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನೀರು ಸರಬರಾಜು ಮಾಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿರುವುದಾಗಿ ತಿಳಿದು ಬಂದಿದೆ.