ಉಪ್ಪಿನಂಗಡಿ: ಶ್ರೀ ಉಮಾಮಹೇಶ್ವರ ಯಕ್ಷಕಲಾ ಇಷುಧಿ ಆಯೋಜಿಸುವ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸಹಕಾರದೊಂದಿಗೆ ಎ.13ರಂದು ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಆವರಣದಲ್ಲಿ ಶ್ರೀ ಮಹಾಭಾರತ ಸರಣಿಯ ಕಲಾ ಕಾಣಿಕೆ ಯಕ್ಷವಚೋ ವೈಭವದಲ್ಲಿ ‘ಛಲದಂಕ ಚಕ್ರೇಶ್ವರ’ ತಾಳಮದ್ದಳೆ ನಡೆಯಲಿದೆ.
ಸಂಜೆ 3ರಿಂದ 6ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಹಿಮ್ಮೇಳದಲ್ಲಿ ಮಹೇಶ್ ಕನ್ಯಾಡಿ, ಶಾಲಿನಿ ಹೆಬ್ಬಾರ್, ಚೆಂಡೆ ಮದ್ದಳೆಯಲ್ಲಿ ವರುಣ್ ಹೆಬ್ಬಾರ್, ಶ್ರೀಪತಿ ಭಟ್ ಉಪ್ಪಿನಂಗಡಿ ಹಾಗೂ ಅರ್ಥದಾರಿಗಳಾಗಿ ನಿಡ್ಲೆ ಗೋವಿಂದ ಭಟ್, ಈಶ್ವರ ಪ್ರಸಾದ ಪಿ.ವಿ., ದಿವಾಕರ ಆಚಾರ್ಯ ಗೇರುಕಟ್ಟೆ, ಅಂಬಾಪ್ರಸಾದ ಪಾತಾಳ, ರವಿ ಭಟ್ ನೆಲ್ಯಾಡಿ, ಪೆರುವೋಡಿ ಸುಬ್ರಹ್ಮಣ್ಯ ಭಟ್, ಶ್ರೀಧರ ಎಸ್.ಪಿ. ಸುರತ್ಕಲ್, ಹರೀಶ್ ಆಚಾರ್ಯ ಬಾರ್ಯ, ಶ್ರೀಮತಿ ಶ್ರುತಿ ವಿಸ್ಮಿತ್ ಭಾಗವಹಿಸಲಿದ್ದಾರೆ.