ʼಅಣ್ಣನ ನೆನಪುʼ ಪುಸ್ತಕದ ಕರ್ತೃ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರ, ಪರಿಸರದ ಕಥನದ ಹಾಸ್ಯದೊಂದಿಗೆ ಜನರಿಗೆ ಗಂಭೀರತೆಯ ಮನದಟ್ಟು ಮಾಡುವ ಬರಹದ ಮೋಡಿಗಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ.
ಪೂರ್ಣಚಂದ್ರರಿಗೆ ಜ್ಞಾನಪೀಠ ಲಭಿಸಲಿಲ್ಲ ಯಾಕೆ?…. ಅನ್ನುವ ಛಾಯೇಯೊಂದು ಅವರ ಪುಸ್ತಕ ಓದಿ ಅಭಿಮಾನಿಯಾದವರಲ್ಲಿ, ಸಾಹಿತ್ಯ ಲೋಕದಲ್ಲಿ ಪಳಗಿದವರಿಗೆ ಕಾಡಿದ್ದ, ಕಾಡುವ, ಮುಂದೆ ಕಾಡುತ್ತಲೇ ಇರುವ ನಿರಂತರತೆಯ ಪ್ರಶ್ನೆ.
ಬಿಡಿ ಇಲ್ಲಿ ಹೇಳಬೇಕಾಗಿರುವುದು ತೇಜಸ್ವಿಯವರ ಪ್ರಶಸ್ತಿಗಳ ಕೊರೆತೆಯನ್ನಲ್ಲ. ನಮ್ಮ ಕನ್ನಡಿಗರಿಗಾಗಿ ಅಚ್ಚಾಗಿ ಉಳಿಸಿಹೋದ, ಅಚ್ಚಾಗಿಯೇ ಉಳಿದಿರುವ ಅವರ ಕೈಚಳಕದ ಅಕ್ಷರ ಬ್ರಹ್ಮತ್ವದ ಕುರಿತು.
ತೇಜಸ್ವಿ ಅಂದಾಗ ನಮಗೆ ನಾನಾ ರೀತಿಯಲ್ಲಿ ಅವರನ್ನು ಚಿತ್ರಿಸುವ ಆಧುನಿಕ ಸಾಹಿತ್ಯ ಪಂಡಿತರಿದ್ದಾರೆ. ಅವರೊಬ್ಬ ನಾಸ್ತಿಕ, ಪರಿಸರದ ಕಾಳಜಿಯುಳ್ಳ ವ್ಯಕ್ತಿ, ಸ್ವತಂತ್ರ ಚಿಂತನೆ, ಅವರನ್ನು ಹೇಗೆಂದು ಅರಿಯಲು ಸಾಧ್ಯವೇ ಆಗುತ್ತಿಲ್ಲ ಎನ್ನುವವರೂ ಅನೇಕರು.ಇದು ಅವರ ವಿಭಿನ್ನತೆ. ಈ ವಿಭಿನ್ನತೆ ಅವರ ಪುಸ್ತಕಗಳಲ್ಲಿ ಎದ್ದು ಕಾಣುತ್ತದೆ. ಅದಕ್ಕೆ ಕೈಗನ್ನಡಿ ಅಣ್ಣನ ನೆನಪು.
ತೇಜಸ್ವಿಯವರಿಗೆ ಅಣ್ಣನಿದ್ದಾನ? ಎನ್ನುವ ಪ್ರಶ್ನೆ ಅನೇಕರಿಗೆ ಈ ಶಿರ್ಷಿಕೆಯ ಕಂಡಾಗ ಬರುವಂತಹುದು ಸಹಜವೇ. ಮತ್ತು ಬರಲೇಬೇಕು ಎನ್ನುವುದು ಸಾಹಿತ್ಯ ಪ್ರೀಯರ ಅಂಭೋಣ. ಅಷ್ಟಕ್ಕೂ ನಿಮಗೂ ಇಷ್ಟೆಲ್ಲ ಓದಿದ ಬಳಿಕ ಇದರಲ್ಲಿ ಅಂತಹ ವಿಶೇಷ ಏನಿದೆಯಪ್ಪಾ? ಅನ್ನುವ ಅಂಶವೊಂದು ಹಾಗೇ ಮನದಲ್ಲಿ ಹಾದು ಹೋಗಬಹುದು.ಅದಕ್ಕುತ್ತರವಾಗಿ ಒಂದಷ್ಟು ಈ ಪುಸ್ತಕದ ಕುರಿತು ಹೇಳಲು ನಮ್ಮ ಪ್ರಯತ್ನ…..
ಒಂದು ಮಾತ್ರ ಪೂರ್ತಿ ಸತ್ಯ, ನಾವೊಂದಷ್ಟು ಮೇಲಿಂದ ಮೇಲೆ ಹೇಳಬಲ್ಲೆವು ಒಳಗಿಂದೊಳಗೆ ಅರಿಯಬೇಕಾದರೆ ನೀವೇ ಪುಸ್ತಕ ತೆಗೆದುಕೊಳ್ಳಿ. ಓದಿಕೊಳ್ಳಿ.
ನಾವು ಅಣ್ಣನ ನೆನಪಿಗೆ ಸ್ವಲ್ಪ ಬರೋಣ. ಪೂರ್ಣಚಂದ್ರರಿಗೆ ಅಣ್ಣ ಇದ್ದರು ಹೌದು ಅದು ತಂದೆಯ ರೂಪದಲ್ಲಿ. ತಂದೆಯೇ ಇವರ ಅಣ್ಣ ಅಂದರೆ ತಂದೆಯಾದ ಕುವೆಂಪು ಅವರೇ ಇವರ ಅಣ್ಣ. ಕುವೆಂಪು ಅವರನ್ನು ಪ್ರೀತಿಯಿಂದ ಮನೆಯಲ್ಲಿ ಕರೆಯುತ್ತಿದ್ದದ್ದೇ ಹೀಗೆ. ಈ ಪುಸ್ತಕವು ತೇಜಸ್ವಿಯವರ ಅನುಭವ ಕಥನಗಳ ಸಂಕಲನ. ಇದರಲ್ಲಿರುವ ಪ್ರತಿಯೊಂದು ಅಧ್ಯಾಯವು ಹಾಸ್ಯಬುಗ್ಗೆಯನ್ನು ತರಿಸುವುದರೊಂದಿಗೆ ಕುವೆಂಪುರವರ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ.
ಎಲ್ಲೂ ತಂದೆಯ ಗುಣಗಾನ ಮಾಡದೆ, ಅವರ ನೈಜ ವ್ಯಕ್ತಿತ್ವವನ್ನು ಒಬ್ಬ ಸಾಮಾನ್ಯ ಮಗನಂತೆ ಕಟ್ಟಿಕೊಡುತ್ತಾರೆ ತೇಜಸ್ವಿ.
ಒಂದುಕಡೆ ಇಂಗ್ಲೀಷ್ ಜ್ಞಾನ ಮುಖ್ಯವೆಂದು ಶೂದ್ರರಿಗೆಲ್ಲ ಕರೆಕೊಡುತ್ತಾರೆ. ಕನ್ನಡದ ವಿಷಯಕ್ಕೆ ಬಂದಾಗ ಇಂಗ್ಲೀಷ್ ಅನ್ನು ಪೂತನಿಯೆಂದು ಟೀಕಿಸುತ್ತಾರೆ. ಭಾರತೀಯ ಸನಾತನ ಧರ್ಮದ ಕಟು ವಿಮರ್ಶೆ ಕುವೆಂಪು ಅವರಲ್ಲಿ ಕಾಣಬಹುದು. ಅಂತೆಯೆ ಉಪನಿಷದ್ ದರ್ಶನಗಳ ಆರಾಧನೆಯನ್ನೂ ಅವರಲ್ಲಿ ಕಾಣಬಹುದು. ಅವರ ಜೀವನಾದ್ಯಂತ ಎಂದೂ ಯಾವ ದೇವಸ್ಥಾನಕ್ಕೂ ಕಾಲಿಡಲಿಲ್ಲ. ಆದರೆ ಅಷ್ಟೆ ಗಾಢವಾಗಿ ಧ್ಯಾನ ತಪಸ್ಯೆ ಪ್ರಾರ್ಥನೆಗಳನ್ನು ಪ್ರತಿಪಾದಿಸಿದರು. ಕುವೆಂಪು ವ್ಯಕ್ತಿತ್ವದಲ್ಲಿದ್ದ ಮಾನವೀಯತೆ, ಮುಗ್ದತೆ, ವೈಜ್ಞಾನಿಕ ಮನೋಭಾವ, ನಿಷ್ಟುರತೆಗಳನ್ನು ಅವರು ಅನೇಕ ಪ್ರಸಂಗಗಳ ಮುಖಾಂತರವೇ ತಿಳಿಸುತ್ತಾರೆ. ಸಾರ್ವಜನಿಕವಾಗಿ ತಮ್ಮ ಮಕ್ಕಳು ಮಾಡುವ ಪುಂಡಾಟಿಕೆಯನ್ನು ಸಮರ್ಥಿಸಿಕೊಳ್ಳುವ ಸೆಲೆಬ್ರಿಟಿಗಳಿಂದಲೇ ತುಂಬಿರುವ ಈ ನಮ್ಮ ದೇಶದಲ್ಲಿ ಮಗನ ಮೇಲೆ ವಾರೆಂಟ್ ಬಂದರೂ ತಮ್ಮ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಳ್ಳದೇ ಮಗನಿಗೆ ಬುದ್ಧಿ ಹೇಳುವ ಕುವೆಂಪು ವಿಶೇಷವೆನಿಸುತ್ತಾರೆ.
“ನನಗೆ ತಿಳಿದ ಹಾಗೆ ಅಣ್ಣ ತಮಾಷೆ ವಿನೋದಗಳೊಂದಿಗೆ ಅನ್ನ ತಿನ್ನುವ ನಮ್ಮೆಲ್ಲರಂತೆ ಬದುಕಿದ್ದರು. ಬದುಕನ್ನು ಒಂದು ವ್ರತದಂತೆ ಪರಿಗಣಿಸಿ ವ್ರತನಿಷ್ಟರಂತೆ ಅವಡುಗಚ್ಚಿ ಜೀವಿಸುತ್ತಿದ್ದುದನ್ನು ನಾನಂತೂ ಕಂಡಿಲ್ಲ” ಎನ್ನುವ ಮಾತು ತೇಜಸ್ವಿಯವರದ್ದು.
ಇವಿಷ್ಟು ಪುಸ್ತಕದ ಕೆಲ ಸ್ವಾರಸ್ಯತೆ ನಿಜವಾದ ಸ್ವಾರಸ್ಯತೆ ಪುಸ್ತಕ ಕೊಂಡು ಓದಿದಾಗಲೇ ಸಿಗುವುದು ಅಲ್ವಾ. ಹಾಗಾದ್ರೆ ಇನ್ನೇಕೆ ಮನಸ್ಸಿನಲ್ಲಿ ಪ್ರಶ್ನೆಯನ್ನೇ ಇಟ್ಟುಕೊಂಡಿದ್ದೀರಿ. ಅಣ್ಣನ ನೆನಪಿನ ಮೂಲಕ ಕುವೆಂಪು ಅವರನ್ನು ಅರಿತು ಉತ್ತರ ಕಂಡುಕೊಳ್ಳಿ. ಪುಸ್ತಕ ಖರೀದಿಸಲು ಈ ಕೆಳಗಿನ ಲಿಂಕ್ ಅನ್ನು ಅದುಮಿದರೆ ಸಾಕು ಎಲ್ಲವೂ ನಿಮಗಾಗಿ ತೆರೆಯಲಿದೆ.👇👇
https://pustakamane.com/shop-2 contact number – 9606474289
https://shorturl.at/iS7Zf