ಕಾಣಿಯೂರು: ಸ ಹಿ ಪ್ರಾ ಶಾಲೆ ನಾಣಿಲದಲ್ಲಿ ಡಾ ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿ ಅವರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಮುಖ್ಯಗುರು ಪದ್ಮಯ ಗೌಡ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶೋಭಾ ಬಾಕಿಲ, ಸದಸ್ಯರಾದ ಪುರಂದರ ಅಂಬುಲ, ವಸಂತ ಮುಂಗ್ಲಿ ಮಜಲು, ಲೋಕೇಶ ಅಭಿಕಾರ, ಶಿಕ್ಷಕರಾದ ಶೋಭ, ನಂದಿನಿ, ಹಾಗೂ ವಿದ್ಯಾರ್ಥಿ ನಾಯಕಿ ಅಸ್ಮಿತ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಮೋಹಿನಿ ವಂದಿಸಿದರು.