ಪುತ್ತೂರು: ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್‌ನಲ್ಲಿ ಅಂತ್ಯವಿಶ್ರಮ ಹೊಂದುತ್ತಿರುವ ಜಾತಿ-ಮತ-ಬೇಧವಿಲ್ಲದೇ ಸಾವಿರಾರು ಮಂದಿ ಆಗಮಿಸಿ ಪ್ರಾರ್ಥಿಸುವ, ಜನರ ಕಷ್ಟ ಕಾರ್ಪಣ್ಯಗಳ ಸಮಸ್ಯೆಗಳಿಗೆ ಪರಿಹಾರ ಕೇಂದ್ರವಾದ ವಲಿಯುಲ್ಲಾಹಿರವರ ಉರೂಸ್ ಸಮಾರಂಭ ಎ.20ರಿಂದ ಎ.26ರ ವರೆಗೆ ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.