ಪುತ್ತೂರು: ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ವತ್ ಕ್ಲಾಸ್ ಕನೆಕ್ಟ್ ಉದ್ಘಾಟನೆ ಹಾಗೂ ಓರಿಯೆಂಟೇಷನ್ ಕಾರ್ಯಕ್ರಮ ಎ.17ರಂದು ನಡೆಯಿತು.
ಹತ್ತನೇ ತರಗತಿ ಪರೀಕ್ಷೆ ಬರೆದು ಮುಂದಿನ ಪಿಯು ಶಿಕ್ಷಣಕ್ಕಾಗಿ ತಯರಾಗುವ ನೀಟ್/ ಜೆಇಇ / ಸಿಇಟಿ ಮುಂತಾದ ಆಕಾಂಕ್ಷಿಗಳು ಈ ವಿದ್ವತ್ ಪ್ರೇರಣಾ ಕೋಚಿಂಗ್ ಗೆ ನೊಂದಾಯಿಸಿಕೊಂಡಿದ್ದಾರೆ .
ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಗಂಗಾಧರ ಈ ಮಂಡಗಳಲೆ ವಿದ್ಯಾರ್ಥಿಗಳು ಪಿಯು ಕಾಲೇಜು ಅಭ್ಯಾಸದ ಸಮಯದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ ನೀಡಿದರು. ಪಿಯು ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ 27 ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಡಾ. ಪ್ರದೀಪ್ ನಾವೂರ್ ಅವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭಕೋರಿದರು.
ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ವಿದ್ವತ್ ಪ್ರೇರಣಾ ಕ್ಲಾಸ್ ಕನೆಕ್ಟ್ ನ ಮಹತ್ವವನ್ನು ವಿವರಿಸಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮುನ್ನಡೆಗೆ ಹೇಗೆ ಸಹಾಯಕ ಎಂಬುದನ್ನು ತಿಳಿಸಿದರು.

ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಜ್ವಲ್ ರೈ, ಹಿರಿಯ ಸಲಹೆಗಾರ ರಾಧಾಕೃಷ್ಣ ರೈ ಹಾಗೂ ವಿದ್ವತ್ ಪಿಯು ಕಾಲೇಜಿನ ಉಪನ್ಯಾಸಕರ ತಂಡ ಹಾಗೂ ರಾಜ್ಯದ ಎಲ್ಲೆಡೆಯಿಂದ ಬಂದಂತಹ ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.