ಪುತ್ತೂರು ಗ್ರಾಹಕರ ಶಾಪಿಂಗ್ ಹಬ್ಬದ ಸಿಹಿ ಸುದ್ದಿ : ಪುತ್ತೂರು ವಾಣಿಜ್ಯ ಕೈಗಾರಿಕಾ ಸಂಘದಿಂದ ಕೂಪನ್ ವಿತರಣೆ

0

ಪುತ್ತೂರು: ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರದಲ್ಲಿ ಪುತ್ತೂರಿನ ವರ್ತಕರ ವ್ಯಾಪಾರ ಅಭಿವೃದ್ಧಿಗೆ ಗ್ರಾಹಕರಿಗೆ ನೂತನ ಕೂಪನ್‌ ವಿತರಣೆಯ ಪ್ರಥಮ ಪ್ರಯತ್ನ ಹಾಗೂ ವಿಶೇಷ ಯೋಜನೆಯನ್ನು ಪುತ್ತೂರಿನ ಗ್ರಾಹಕರಿಗೆ ಶಾಪಿಂಗ್ ಹಬ್ಬವಾಗಿ ಪರಿಚಯಿಸುತ್ತಿದ್ದಾರೆ.

ಈ ನೂತನ ಯೋಜನೆಯ ಅಂಗವಾಗಿ ನಗರದ ವ್ಯಾಪಾರ ವ್ಯವಹಾರ ಅಭಿವೃದ್ಧಿಗಾಗಿ ಗ್ರಾಮ ದೇವರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯದ ಆಡಳಿತ ಮಂಡಳಿ, ವರ್ತಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಗ್ರಾಹಕ ಬಂದು ಮಿತ್ರರು ಉಪಸ್ಥಿತರಿದ್ದರು.

ಬಳಿಕ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ಜ್ಯುವೆಲ್ಲರ್ಸ್ ಮಾಲಕರಾದ ಕೇಶವ ಪ್ರಸಾದ್ ಮುಳಿಯರವರ ಕಛೇರಿಯಲ್ಲಿ ಪ್ರಥಮವಾಗಿ ಕೂಪನ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದರ್ಬೆ ಬುಶ್ರಾ ಟವರ್ಸ್ ನಲ್ಲಿನ ನಯಾ ಚಪ್ಪಲ್ ಬಜಾರ್ ಸಂಸ್ಥೆಯ ಪಾಲುದಾರ ಎಂ.ಜಿ ರಫೀಕ್, ದರ್ಬೆ ಸುದರ್ಶನ್ ಹಾರ್ಡ್ ವೇರ್ ಸಂಸ್ಥೆಯ ಮಾಲಕರಾದ ಮನೋಜ್ ಟಿ.ವಿ, ಅನೂಪ್ ಟಿ.ವಿರವರು ಶಾಪಿಂಗ್ ಹಬ್ಬದ ಕೂಪನ್ ಪಡೆಯುವ ಮೂಲಕ ಸಹಕರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರವಿಕೃಷ್ಣ ಡಿ ಕಲ್ಲಾಜೆ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ಕೋಶಾಧಿಕಾರಿ ಜಾನ್ ಕುಟಿನ್ಹಾ, ಕೂಪನ್ ಯೋಜನೆ ಸಂಚಾಲಕರಾದ ಶಶಿರಾಜ್ ರೈ, ಎಂ.ಜಿ ರಫೀಕ್ ಹಾಗೂ ಶ್ರೀಕಾಂತ್ ಕೊಳತ್ತಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here