ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ವಿಶ್ವ ಭೂದಿನ ಕಾರ್ಯಕ್ರಮ

0

ಪುತ್ತೂರು: ದೇಶದ್ಯಾಂತ ಎ.22ರಂದು ವಿಶ್ವ ಭೂದಿನವನ್ನಾಗಿ ಆಚರಿಸುತ್ತಿದ್ದು ಪರಿಸರ ಪ್ರೇಮ ದೊಂದಿಗೆ ಗಿಡಗಳ ಪರಿಚಯ, ಸ್ವಚ್ಛತೆ, ಕಸವಿಲೇವಾರಿ, ನೀರು ಇಂಗಿಸುವಿಕೆ ಇತ್ಯಾದಿ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸುವ ಅಂಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ಪ್ರತಿ ಶಾಲೆಯಲ್ಲೂ ಇಕೋ ಕ್ಲಬ್ ಸ್ಥಾಪಿಸಲಾಗಿದ್ದು ಆ ಪ್ರಯುಕ್ತ ವಿಶ್ವ ಭೂದಿನವಾದ ಏ.22ರಂದು ಗಿಡಗಳ ಪರಿಚಯ ಮಾಡಲು ಗಿಡಗಳಿಗೆ QR CODE ಕಟ್ಟುವುದರ ಮೂಲಕ ವೀರಮಂಗಲ ಪಿಎಂಶ್ರೀ ಶಾಲೆಯ ಇಕೋ ಮತ್ತು ಯೂತ್ ಕ್ಲಬ್ ನ ವಿದ್ಯಾರ್ಥಿಗಳು, ಮುಖ್ಯಗುರು ತಾರಾನಾಥ ಪಿ ಇವರ ಮಾರ್ಗದರ್ಶನದಂತೆ ಚಾಲನೆ ನೀಡಿದರು. ಎಸ್ ಡಿ ಎಂ ಸಿ ಸದಸ್ಯರಾದ ಹರೀಶ್ ಮಣ್ಣಗುಂಡಿ, ಕುಸುಮಾ ಸುರೇಶ್ ಸಹಕರಿಸಿದರು.

LEAVE A REPLY

Please enter your comment!
Please enter your name here