ಬೆಟ್ಟಂಪಾಡಿ: ಶಿವಗಿರಿ ಹಾಲು ಉತ್ಪಾದಕರ ಸಂಘ ಬೆಟ್ಟಂಪಾಡಿ ಇಲ್ಲಿ ವರ್ಣಿಕಾ ಡ್ರಾಯಿಂಗ್ ಸ್ಕೂಲ್ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ಇವರ ಅಧ್ಯಕ್ಷತೆಯಲ್ಲಿ ಏ.18ರಂದು ಶುಭಾರಂಭಗೊಂಡಿತು.
ಕೆಯ್ಯೂರು ಜಿಪಿಎಸ್ ಶಾಲಾ ಚಿತ್ರಕಲಾ ಶಿಕ್ಷಕ ಪ್ರಕಾಶ್ ವಿಟ್ಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ‘ಭಾರತೀಯ ಲಲಿತ ಕಲೆಗಳಲ್ಲಿ ಚಿತ್ರಕಲೆಯು ಒಂದು. ಇದೊಂದು ಭಾಷೆಯು ಹೌದು. ಇದನ್ನು ಸದುಪಯೋಗಪಡಿಸಿಕೊಂಡಲ್ಲಿ ಉತ್ತಮ ಭವಿಷ್ಯ ನಿರ್ಮಾಣವಾಗಬಹುದು’ ಎಂದು ಹೇಳಿ ಶುಭಹಾರೈಸಿದರು.
ವೇದಿಕೆಯಲ್ಲಿ ಶಿವಗಿರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ ಉಪಸ್ಥಿತರಿದ್ದರು. ವರ್ಣಿಕ ಡ್ರಾಯಿಂಗ್ ಶಾಲಾ ಮುಖ್ಯಸ್ಥ ರಂಜಿತ್ ಕೆ.ಎಂ ಪ್ರಾಸ್ತಾವಿಕ ಮಾತುಗಳಾಡಿದರು. ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲಾ ಸಹ ಶಿಕ್ಷಕಿ ಭವ್ಯ ವೇಣುಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.
ಬೆಟ್ಟಂಪಾಡಿ ವರ್ಣಿಕಾ ಡ್ರಾಯಿಂಗ್ ಸ್ಕೂಲ್ ಸೇರಲು ಇಚ್ಚಿಸುವ ಆಸಕ್ತ ವಿದ್ಯಾರ್ಥಿಗಳು ರಂಜಿತ್ ಕೆಎಂ-7760312260 ಸಂಪರ್ಕಿಸಬಹುದಾಗಿದೆ.