ಪುತ್ತೂರು: ತಾಲೂಕು ಮಹಿಳಾ ಬಂಟರ ವಿಭಾಗದ ಮಾಸಿಕ ಸಭೆಯು ಪುತ್ತೂರು ಬಂಟರ ಭವನ ಕೊಂಬೆಟ್ಟು ಇಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ ರೈ ನರಿಮೊಗರು ಇವರ ಅಧ್ಯಕ್ಷತೆಯಲ್ಲಿ ಎ.11ರಂದು ಜರುಗಿತು.
ಬಂಟರ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕ ಕುಂಬ್ರ ದುರ್ಗಾ ಪ್ರಸಾದ್ ರೈ, ಮಾತೃ ಸಂಘದ ನಿರ್ದೇಶಕ ಜಯಪ್ರಕಾಶ್ ರೈ ನೂಜಿಬೈಲು,ಬಂಟರ ಸಂಘದ ಮಾಜಿ ಕಾರ್ಯದರ್ಶಿ ಮೋಹನ್ ರೈ ನರಿಮೊಗರು, ಬಂಟರ ಸಂಘ ನಿರ್ದೇಶಕರಾದ ಸ್ವರ್ಣಲತಾ ಜೆ ರೈ, ಕೋಶಾಧಿಕಾರಿ ಅರುಣಾ ಡಿ ರೈ ಉಪಸ್ಥಿತರಿದ್ದರು.
ಮಾ.11ರಂದು ನಡೆದ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮದ ಲೆಕ್ಕಪತ್ರವನ್ನು ಕೋಶಾಧಿಕಾರಿ ಅರುಣಾ ಡಿ.ರೈ ಸಭೆಯ ಮುಂದಿಟ್ಟರು. ಸೌಪರ್ಣಿಕ ಗುರುರಾಜ್ ರೈ, ಮೋಹನ ರೈ ನರಿಮೊಗರು, ದುರ್ಗಾಪ್ರಸಾದ್ ರೈ ಕುಂಬ್ರ ಇವರನ್ನು ಮಾಸಿಕ ಸಭೆಯಲ್ಲಿ ಗೌರವಿಸಲಾಯಿತು. ಹೇಮನಾಥ ಶೆಟ್ಟಿ ಕಾವುರವರನ್ನು ಬಂಟರ ಸಂಘ ಪುತ್ತೂರು ತಾಲೂಕು ಇದರ ಅಧ್ಯಕ್ಷರು ಎಂಬ ನೆಲೆಯಲ್ಲಿ ಹಾಗೂ ಪೂರ್ಣ ಸಹಕಾರ ಕೊಟ್ಟದ್ದಕ್ಕಾಗಿ ಮಹಿಳಾ ವಿಭಾಗದಿಂದ ಸನ್ಮಾನಿಸಲಾಯಿತು. ಈ ವೇಳೆ ಅನಿತಾ ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು. ಬಂಟರ ಸಂಘದ ಪದಾಧಿಕಾರಿಗಳಾದ ಗಣೇಶ್ ಶೆಟ್ಟಿ, ರವಿ ಪ್ರಸಾದ್ ಶೆಟ್ಟಿ, ಮನ್ಮಥ ಶೆಟ್ಟಿ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಗೀತಾ ಮೋಹನ ರೈ ರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಜೀವಿ ವಿ ಶೆಟ್ಟಿ ಸಹಕರಿಸಿದರು. ಪದ್ಮಿನಿ ಪ್ರಜ್ವಲ್ ರೈ ಪ್ರಾರ್ಥಿಸಿದರು. ಕೋಶಾಧಿಕಾರಿ ಅರುಣಾ ಡಿ ರೈ ವಂದಿಸಿದರು.