ಪುತ್ತೂರು: ಪುತ್ತೂರಿನಿಂದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಗೊಂಡಿದ್ದು, ಈ ಭಾಗದ ಬಹುಕಾಲದ ಬೇಡಿಕೆ ಈಡೇರಿಸಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರಿನಿಂದ ಬೆಟ್ಟಂಪಾಡಿ, ಪಾಣಾಜೆ- ಕಾಟುಕುಕ್ಕೆ- ಅಡ್ಕಸ್ಥಳ- ಸಾರಡ್ಕ, ಅಡ್ಯನಡ್ಕ-ವಿಟ್ಲ, ಕಬಕದಿಂದ ಪುತ್ತೂರು ಮಾರ್ಗವಾಗಿ ನಿತ್ಯ ಬಸ್ ಸಂಚಾರ ಆರಂಭಗೊಂಡಿದೆ.
ಕಾಟುಕುಕ್ಕೆಯಿಂದ ಬೆಟ್ಟಂಪಾಡಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಈ ಬೇಡಿಕೆಯನ್ನು ಶಾಸಕರ ಮುಂದಿಟ್ಟಿದ್ದರು. ಕಾಟುಕುಕ್ಕೆ ಭಾಗದಿಂದ ಬೆಟ್ಟಂಪಾಡಿ ಸರಕಾರಿ ಕಾಲೇಜಿಗೆ ಬರುವ ಅನೇಕ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯವಿಲ್ಲದೆ ವಂಚಿತರಾಗಿದ್ದರು. ಸಾರ್ವಜನಿಕರಿಗೂ ಈ ಬಸ್ ವ್ಯವಸ್ಥೆ ಪ್ರಯೋಜನಕಾರಿಯಾಗಲಿದೆ. ಪುತ್ತೂರಿನಿಂದ ಇಂಟರ್ ಸ್ಟೇಟ್ ಬಸ್ ಸೌಲಭ್ಯವನ್ನು ಸಾರ್ವಜನಿಕರು ವಿದ್ಯಾರ್ಥಿಗಳು ಬಳಸಿಕೊಳ್ಳುವಂತೆ ಶಾಸಕರು ವಿನಂತಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಪುತ್ತೂರಿನಿಂದ ಕಾಟುಕುಕ್ಕೆಗೆ ಸರಕಾರಿ ಬಸ್ ಸೇವೆ ಆರಂಭ- ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ