“ಹೆಣ್ಣಿಗೆ ಸೀರೆ ಯಾಕೆ ಅಂದ“.. ನಾರಿಗೂ ಸಾರಿಗೂ ಏನೋ ನಂಟು, ಮಹಿಳೆಯರು ಸೀರೆಯುಟ್ಟರೆ ಸಾಕ್ಷಾತ್ ದೇವತೆಯಂತೆ ಕಾಣುತ್ತಾರೆಂಬ ಮಾತುಗಳನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಸೀರೆ ಅಂದ್ರೆ ಸಾಮಾನ್ಯವಾಗಿ ಎಲ್ಲ ಮಹಿಳೆಯರಿಗೆ ಇಷ್ಟ.
ಫ್ಯಾಮಿಲಿ ಫಂಕ್ಷನ್‌ಗಳಲ್ಲಿ, ಫ್ರೆಂಡ್ಸ್ ಮದುವೆಯಲ್ಲಿ ಸೀರೆ ಹಾಕಿಕೊಂಡು ಮಿಂಚುವ ಆಸೆ. ಆದರೆ ಈಗಿನ ಬ್ಯುಸಿ ಲೈಫ್‌ನಲ್ಲಿ ಹೆಣ್ಣುಮಕ್ಕಳಿಗೆ ಸಾರಿಯುಡಲು ಸಮಯವೇ ಸಾಲುವುದಿಲ್ಲ. ಸಮಯವಿದ್ದರೂ ಉಡಲು ಬರುವುದಿಲ್ಲ ಅನ್ನುವ ಸಮಸ್ಯೆ ಒಂದೆಡೆ. ಪ್ರತಿಬಾರಿ ಬೇರೆಯವರ ಬಳಿಯೇ ಎಷ್ಟು ಅಂತ ಸೀರೆ ಹಾಕೋದಿಕ್ಕೆ ಹೆಲ್ಪ್ ಕೇಳೋದು ಅಲ್ವಾ? ಸೀರೆಗಳನ್ನು ಸಾಮಾನ್ಯವಾಗಿ ಆಯಾ ವಿನ್ಯಾಸಗಳಿಗೆ ಅನುಗುಣವಾಗಿ ನೀಟಾಗಿ ಉಟ್ಟರೆ ಇನ್ನಷ್ಟು ಸುಂದರವಾಗಿ ಕಾಣಬಹುದು. ಪರಿಪೂರ್ಣವಾದ ಡ್ರಾಪಿಂಗ್ ಶೈಲಿಯು (Draping style) ನಿಮ್ಮ ಸೊಬಗನ್ನು ಹೆಚ್ಚಿಸುತ್ತದೆ. ಸೌಂದರ್ಯದ ಸೊಬಗನ್ನ ಹೆಚ್ಚಿಸೋ ಸಾರಿ ವೇರ್ (Saree Ware) ಮಾಡೋ ಮುನ್ನ.. ಈ ಟಿಪ್ಸ್ ಗಮನಿಸಿ (Follow these tips)

ಸೀರೆ ಉಡುವ ಮೊದಲು ಈ ಟಿಪ್ಸ್ ಗಮನಿಸಿ..
ಮೊದಲಿಗೆ ನೀವು ಉಡುವ ಸೀರೆಯು 5 ರಿಂದ ಒಂಬತ್ತು ಮೀಟರ್ ಉದ್ದ ಮತ್ತು 3 ಅಡಿ ಅಗಲವಿರಬೇಕು. ಸೀರೆಯಲ್ಲಿ ವಿವಿಧ ವೈರೈಟಿಗಳನ್ನು ನೀವು ಹುಡಕಿ. ಅಂದರೆ ನಿಮಗಿಷ್ಟವಾದ ಕಸೂತಿ ಕೆಲಸಗಳಿರುವ ಸೀರೆ, ಬಾಂದಿನಿ, ಮಧುಬನಿ ಪ್ರಿಂಟ್, ಬ್ಲಾಕ್ ಪ್ರಿಂಟಿಂಗ್, ಕಶ್ಮೀರಿ ಆರಿ ವರ್ಕ್, ಗೊಟಾ ಪಟ್ಟಿ, ಕಮ್ದಾನಿ, ಇತ್ಯಾದಿ ಹಲವಾರು ಬಗೆಯ ಸೀರೆಗಳನ್ನು ಆಯ್ಕೆ ಮಾಡಿಕೊಂಡ್ರೆ ಇನ್ನೂ ಉತ್ತಮ. ಏನೇ ಆದ್ರೂ ಕೊನೆಗೆ ನಿಮಗಿಷ್ಟವಾದ ಸಾರಿಯನ್ನೆ ಆಯ್ಕೆ ಮಾಡಿ.
ಸೀರೆಯನ್ನು ಉಡುವುದು ಹೇಗೆ ? ( How to wear a saree)
ನೀವು ಸೀರೆ ಉಡುವಾಗ ಕೆಲವು ನಿರ್ದಿಷ್ಟ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ನೀವು ಅನುಸರಿಸಬೇಕಾದ ಈ ನಿರ್ದಿಷ್ಟ ವಿಧಾನಗಳ ಬಗ್ಗೆ ವಿವರಿಸಿದ್ದೇವೆ. ಹಂತ ಹಂತವಾಗಿ ಈ ವಿಧಾನಗಳನ್ನು ಅನುಸರಿಸಿದಲ್ಲಿ, ಸೀರೆ ಉಡುವುದು ದೊಡ್ದ ಕಷ್ಟವೇನಲ್ಲ. ನೀವು ನಾರ್ಮಲ್ ಸೀರೆ ಸ್ಕರ್ಟ್ (ಲಂಗ)ಗಿಂತಲೂ ಮಾರ್ಕೆಟ್‌ನಲ್ಲಿ ಈಗ ಲಭ್ಯವಿರುವ ಶೇಪ್‌ವಿಯರ್ ಸಾರಿ ಸ್ಕರ್ಟ್ (Shapewear Saree skart) ಬಳಸುವುದು ಉತ್ತಮ. ಇದರಿಂದ ನಿಮ್ಮ ಬಾಡಿ ಶೇಪ್ ಚೆನ್ನಾಗಿ ಕಾಣುತ್ತದೆ.
ಸ್ಟೆಪ್ 1
ಮೊದಲಿಗೆ ಬ್ಲೌಸ್ ಮತ್ತು ಸ್ಕರ್ಟ್ ಧರಿಸಿ. ಈ ಸ್ಕರ್ಟನ್ನು ಸೊಂಟದ ಸುತ್ತ ಗಟ್ಟಿಯಾಗಿ ಕಟ್ಟಿಕೊಳ್ಳಿ. ನಂತರ ಕುಪ್ಪಸ ನಿಮಗೆ ಸರಿಯಾಗಿ ಹೊಂದಿಕೊಳ್ಳುತ್ತದೋ ನೋಡಿಕೊಳ್ಳಿ. ಸ್ಕರ್ಟ್ ನ ಬಣ್ಣವು ಸೀರೆಯ ಬಣ್ಣದ ಜೊತೆಗೆ ಮ್ಯಾಚ್ ಆಗುವಂತಿರಬೇಕು.
ಸ್ಟೆಪ್ 2
ನಂತರ ಪಾದರಕ್ಷೆಯನ್ನು ಧರಿಸಿ! ಹೌದು ನೀವು ಹೈ ಹೀಲ್ಸ್ ಇರುವ ಪಾದರಕ್ಷೆ ಧರಿಸುವವರಾಗಿದ್ದಲ್ಲಿ ಇದನ್ನು ಧರಿಸಿ ಸೀರೆ ಉಡುವುದರಿಂದ ಅದರ ಉದ್ದ ತಿಳಿಯಲು ಸಹಾಯವಾಗುತ್ತದೆ.
ಸ್ಟೆಪ್ 3
ಈಗ ಸೀರೆ ತೆಗೆದುಕೊಳ್ಳಿ. ಈ ಸೀರೆಯ ಕೈ ಕಸೂತಿ ಮತ್ತು ಅಲಂಕಾರವಿರುವ ಹೊರಗೆ ಅಂದರೆ ಎದುರು ಮುಖವಿರಬೇಕು. ಎಡಭಾಗದಲ್ಲಿ ಗಂಟು ಹಾಕುವ ಮೂಲಕ ಸೀರೆಯನ್ನು ಸ್ಕರ್ಟ್ ಒಳಗೆ ಟಕಿಂಗ್ ಮಾಡಲು ಪ್ರಾರಂಭಿಸಿ. ಮಾಡಿ ಹೀಗೆ ಮಾಡುವಾಗ ಕೆಳಗೆ ನಿಮ್ಮ ಆಂಕಲ್ ಮುಚ್ಚುವಂತೆ ನೋಡಿಕೊಳ್ಳಿ.
ಸ್ಟೆಪ್ 4
ಒಮ್ಮೆ ನೀವು ಟಕ್ ಇನ್ ಮಾಡಿದ ನಂತರ ಮಡಿಕೆಗಳನ್ನು ತಯಾರಿಸಲು ಪ್ರಾರಂಭಿಸಿ, ನಿಮ್ಮ ತೋರು ಬೆರಳು ಮತ್ತು ಕಿರುಬೆರಳನ್ನು ಬಳಸಿ ಎಂಟರಿಂದ ಒಂಬತ್ತು ನೆರಿಗೆಗಳನ್ನು ಹಾಕಿ. ನಂತರ ಅಗತ್ಯವಿದ್ದಲ್ಲಿ ಈ ನೆರಿಗೆಗಳಿಗೆ ಪಿನ್ ಮಾಡಿ ನಂತರ ಒಟ್ಟಿಗೆ ಎಲ್ಲವನ್ನೂ ಸ್ಕರ್ಟ್ ಒಳಗೆ ಟಕ್ ಮಾಡಿ. ಬೇಕಾದಲ್ಲಿ ಪಿನ್ ಮಾಡಿ ಪುನಃ ಭದ್ರಗೊಳಿಸಬಹುದು.
ಸ್ಟೆಪ್5
ಪಲ್ಲು ಅಥವ ಸೆರಗು ಹಾಕುವುದು ಹೇಗೆ ನೋಡೋಣ !
ಈಗ ನೆರಿಗೆ ಹಾಕಿ ಉಳಿದಿರುವ ಸೀರೆಯ ಭಾಗವನ್ನು ಮತ್ತೊಮ್ಮೆ ಪ್ಲೀಟ್ಸ್ ತೆಗೆದು ಅದನ್ನು ನಿಮ್ಮ ಎಡ ಭುಜದ ಮೇಲೆ ಇಡಿ ನಂತರ ಈ ಫ್ಲೀಟ್ ಗಳು ಮತ್ತು ಬ್ಸೌಸ್ ನೊಂದಿಗೆ ನೀಟಾಗಿ ಪಿನ್ ಮಾಡಿ. ಕೊನೆಯಲ್ಲಿ ಸೆರಗು ಮತ್ತು ನೆರಿಗೆಯ ಪ್ಲೇಟ್ಸ್ಗಳು ಸರಿ ಕಾಣುತ್ತಿದೆಯಾ ನೋಡಿ ಅರೇಂಜ್ ಮಾಡಿಕೊಳ್ಳಿ. ಸೆರಗಿನ ತುದಿ ಹಾಕಿದ್ದ ಪಿನ್ ತೆಗೆಯಿರಿ. ಇದು ಮೊದಲ ಬಾರಿ ಸೀರೆ ಉಡುವವರಿಗೆ ಇರುವ ಸುಲಭ ವಿಧಾನ. ಈ ಎಲ್ಲಾ ಸ್ಟೆಪ್‌ಗಳು ಮುಗಿದ ನಂತರ ನೀವು ಮೇಕಪ್ ಮತ್ತು ಕೂದಲಿನ ಅಲಂಕಾರ ಮಾಡಿ, ಒಪ್ಪೋವಂತ ಆಭರಣವನ್ನ ಧರಿಸಿ..
ಪ್ರತಿಯೊಬ್ಬ ಹೆಣ್ಣು ಪ್ರಥಮ ಬಾರಿಗೆ ಸಾರಿ ವೇರ್ ಮಾಡೋದು ಅಂದ್ರೆ ಅದು ಅವರ ತಾಯಿಯ ಸೀರೆಯೇ ಆಗಿರುತ್ತದೆ.. ಆ ಫೀಲಿಂಗ್ ವೆರಿ ಡಿಫರೆಂಡ್.. ಆ ಬಳಿಕ ಜೀವನದಲ್ಲಿ ಎಷ್ಟೆ ದುಬಾರಿ ಸಾರಿ ಖರೀದಿಸಿ ವೇರ್ ಮಾಡಿದ್ರೂ ಈ ಫೀಲ್ ಸಿಗೋದಿಲ್ಲ ಅನ್ನೋದು ಪಕ್ಕಾ. ಹಾಗಾಗಿ ನಾವು ಹೇಳಿದ ಟಿಪ್ಸ್ನ್ನ ಅನುಸರಿಸುತ್ತಾ ಅಮ್ಮನ ಸೀರೆಯಲ್ಲೆ ಒಮ್ಮೆ ಪರ್ಫೆಕ್ಟ್ ಆಗಿ ಸಾರಿ ಉಡೋದನ್ನ ಕಲಿತುಕೊಳ್ಳಿ. ನೀವು ಒಬ್ಬರೆ ಇದ್ದರೂ, ಯಾವುದೇ ಸೀರೆಯಾದರೂ ಕ್ವಿಕ್ ಆಗಿ ಸ್ಟೈಲಿಶ್ ಆಗಿ ಉಡೋವಷ್ಟು, ಉಡಿಸುವಷ್ಟು ಪರ್ಫೆಕ್ಟ್ ಆಗ್ತೀರಾ. ಚಂದದ ನಾರಿ ಅಂದದ ಸಾರಿ ವೇರ್ ಮಾಡೋವಾಗ ನಾವು ಕೊಟ್ಟ ಟಿಪ್ಸ್ ಫಾಲೋ ಮಾಡೋದನ್ನ ಮರಿಬೇಡಿ..
https://shorturl.at/dmyrX
https://shorturl.at/0ybFr
https://shorturl.at/2vWIH
https://shorturl.at/fxCPt
https://shorturl.at/jF1NO