ಪುತ್ತೂರು:ಮಹಿಳೆಯೋರ್ವರಿಗೆ ಜಾತಿನಿಂದನೆ ಮಾಡಿ ಹಲ್ಲೆ ಮಾಡಿ ಬೆದರಿಕೆಯೊಡ್ಡಿರುವ ಪ್ರಕರಣದ ಆರೋಪಿತೆಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
2017ರ ದ.2ರಂದು ಘಟನೆ ನಡೆದಿತ್ತು.ಬಜತ್ತೂರು ಗ್ರಾಮದ ನೀರಕಟ್ಟೆ ಸಾಗರ್ ಪವರ್ ಪ್ರೊಜೆಕ್ಟ್ ಕಂಪೆನಿಯಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದ ನೀರಕಟ್ಟೆ ನಿವಾಸಿ ಯಮುನಾ ಎಂಬವರಿಗೆ ಅದೇ ಕಂಪೆನಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಶ್ರೀಮತಿ ಶಾಂಭವಿ ಎಂಬವರು, ನಿನಗೆ ಸರಿಯಾಗಿ ಕ್ಲೀನಿಂಗ್ ಕೆಲಸ ಮಾಡಲು ಆಗುವುದಿಲ್ಲವಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿ ಬೈದು,ಕೈಯಲ್ಲಿದ್ದ ಸ್ಟೀಲ್ ಸಟ್ಟುಗದಿಂದ ಹಲ್ಲೆ ಮಾಡಿ ಜೀವಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿತೆ ಶಾಂಭವಿ ಅವರನ್ನು ಖುಲಾಸೆಗೊಳಿಸಿದೆ.ಆರೋಪಿ ಪರವಾಗಿ ವಕೀಲರಾದ ಮಾಧವ ಪೂಜಾರಿ,ರಾಕೇಶ್ ಬಲ್ನಾಡ್ ಮತ್ತು ಮೋಹಿನಿ ವಾದಿಸಿದ್ದರು.