ಹಜ್ ಕರ್ಮ ನಿರ್ವಹಿಸಿದರೆ ಶಿಶುವಿನಂತೆ ಪರಿಶುದ್ದತೆ-ಪೇರೋಡ್ ಉಸ್ತಾದ್
ಪುತ್ತೂರು: ಹಜ್, ಕಡ್ಡಾಯ ಕರ್ಮಗಳಲ್ಲಿ ಒಂದಾಗಿದ್ದು ಯಾತ್ರಾ ಸೌಕರ್ಯ, ಆರ್ಥಿಕ ಸಂಪನ್ನತೆ ಇದ್ದವರು ಇದರ ಅನುಭಾವಿಗಳಾಗುತ್ತಾರೆ. ಹಜ್ ಕರ್ಮಕ್ಕೆ ನಿಯ್ಯತ್ ಮಾಡಿ ಇಳಿದ ಮೇಲೆ ಮನುಷ್ಯನಲ್ಲಿ ಬದಲಾವಣೆ ಉಂಟಾಗುತ್ತದೆ. ಹಜ್ ಕರ್ಮ ಪೂರ್ತಿ ಮಾಡಿ ಹಿಂದಿರುಗುವಾಗ ಎಲ್ಲದರಿಂದಲೂ ಸ್ವಚ್ಚವಾಗಿ ನವಜಾತ ಶಿಶುವಿನ ರೀತಿ ಪರಿಶುದ್ದತೆಯನ್ನು ಒಳಗೊಂಡವರಾಗುತ್ತಾರೆ. ಈ ಪರಿಶುದ್ದತೆ ಎಂದೆಂದೂ ಖಾಯಂ ಆಗಿರಬೇಕು. ಧಾರ್ಮಿಕ, ಸಾಮಾಜಿಕ ನಡೆನುಡಿಗಳಲ್ಲಿ ಪ್ರಬುದ್ದತೆ, ಶುದ್ದತೆ ಉಳ್ಳವರಾಗಿ ಜೀವನ ನಡೆಸಿದರೆ ಹಜ್ ಕರ್ಮ ಸ್ವೀಕಾರ್ಯತೆಯ ಲಕ್ಷಣವಾಗಿ ಮಾರ್ಪಡುತ್ತದೆ ಎಂದು ಖ್ಯಾತ ಹಜ್ ತರಬೇತುದಾರರು, ವಿಧ್ವಾಂಸರೂ ಆದ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹೇಳಿದರು.
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವತಿಯಿಂದ ಈ ವರ್ಷದ ಹಜ್ ಯಾತ್ರಾರ್ಥಿಗಳಿಗೆ ಎ.29ರಂದು ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ ಏರ್ಪಡಿಸಿದ್ದ ಹಜ್ ತರಬೇತಿ ಶಿಬಿರದಲ್ಲಿ ಅವರು ತರಗತಿ ನೀಡಿ ಮಾತನಾಡಿದರು. ಸುನ್ನೀ ಸಂಘ ಕುಟುಂಬಗಳ ಸಹಯೋಗದೊಂದಿಗೆ ನಡೆದ ಈ ಸಭೆಯಲ್ಲಿ ಸುಮಾರು ಐನೂರಕ್ಕಿಂತಲೂ ಹೆಚ್ಚಿನ ಸ್ತ್ರೀ, ಪುರುಷ ಯಾತ್ರಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ವಹಿಸಿದ್ದರು. ಉಪಾಧ್ಯಕ್ಷ ಡಾ.ಎಂಎಸ್‌ಎಂ ಅಬ್ದುಲ್ ರಶೀದ್ ಝೈನಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಖಾಝಿ ಮಾಣಿ ಅಬ್ದುಲ್ ಹಮೀದ್ ಉಸ್ತಾದ್ ಪ್ರಾರ್ಥನೆ ನೆರವೇರಿಸಿದರು.
ಮರ್ಕಝ್ ಕುಂಬ್ರ ಶರೀಅತ್ ಪ್ರಾಂಶುಪಾಲರಾದ ವಳವೂರು ಮುಹಮ್ಮದ್ ಸಅದಿ, ಮಹಮೂದುಲ್ ಫೈಝಿ ಓಲೆಮುಂಡೋವು, ಸುನ್ನೀ ಸಂಘ ಕುಟುಂಬಗಳ ನಾಯಕರಾದ ಜಿ.ಎಂ ಮುಹಮ್ಮದ್ ಸಖಾಫಿ, ಅಶ್ಹರಿಯ್ಯಾ ಮುಹಮ್ಮದ್ ಅಲೀ ಸಖಾಫಿ, ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಮರ್ಕಝುಲ್ ಹುದಾ ಕುಂಬ್ರ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ, ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ, ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ, ಸದಸ್ಯರಾದ ಯೂಸುಫ್ ಹಾಜಿ ಕೈಕಾರ, ಕರೀಂ ಹಾಜಿ ಕಾವೇರಿ, ಆಶಿಕುದ್ದೀನ್ ಅಖ್ತರ್ ಕುಂಬ್ರ, ಸ್ವಲಾಹುದ್ದೀನ್ ಸಖಾಫಿ, ಅಬೂಬಕ್ಜರ್ ಫೈಝಿ ಪೆರುವಾಯಿ, ಹಸನ್ ಸಖಾಫಿ ಬೆಳ್ಳಾರೆ, ಹನೀಫ್ ಸಖಾಫಿ ತುರ್ಕಳಿಗೆ, ಇಕ್ಬಾಲ್ ಬಪ್ಪಳಿಗೆ, ಜಿ.ಎಂ ಕುಂಞಿ ಉಪ್ಪಿನಂಗಡಿ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ಉಪಸ್ಥಿತರಿದ್ದರು.

ಗಮನ ಸೆಳೆದ ಕಾಬಾ ಮೋಡೆಲ್:
ಹಜ್ ಪ್ರಾತ್ಯಕ್ಷಿಕೆಯನ್ನು ತೋರಿಸಿ ಮನದಟ್ಟು ಮಾಡಿಸುವ ಉದ್ದೇಶದಿಂದ ನಿರ್ಮಿಸಲಾದ ಕಾಬಾ ಮೋಡೆಲ್ ಸೇರಿದ್ದವರ ಗಮನ ಸೆಳೆಯಿತು. ಇದು ಶಿಬಿರಾರ್ಥಿಗಳಿಗೆ ಸುಲಭವಾಗಿ ವಿಚಾರಗಳನ್ನು ಮನವರಿಕೆ ಮಾಡಲು ಸಾಧ್ಯವಾಯಿತು.
ಬಶೀರ್ ಇಂದ್ರಾಜೆಗೆ ಬೀಳ್ಕೊಡುಗೆ:
ಈ ವರ್ಷ ಹಜ್‌ಗೆ ತೆರಳಲಿರುವ ಮತ್ತು ಕುಂಬ್ರ ಮರ್ಕಝುಲ್ ಹುದಾ ಸಂಸ್ಥೆಯ ಪ್ರಗತಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಅವರನ್ನು ಪೇರೋಡ್ ಉಸ್ತಾದ್, ಓಲೆಮುಂಡೋವು ಉಸ್ತಾದ್ ಮತ್ತು ಮರ್ಕಝುಲ್ ಹುದಾ ಪದಾಧಿಕಾರಿಗಳು ಸೇರಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.